ಐತಿಹಾಸಿಕ ಹಿನ್ನೆಲೆಯುಳ್ಳ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ-ಚೆನ್ನಯ್ಯ ಆದಿ ಬೈದರುಗಳ ನೇಮೋತ್ಸವವು ಮಾ. 17 ರಂದು ಅತ್ಯಂತ ವೈಭವದಿಂದ ಜರುಗಿತು. ಮಾ. 15 ರಂದು ಮಹಾಗಣಪತಿ ಹವನ, ರಾತ್ರಿ 7 ಗಂಟೆಗೆ ಎಣ್ಮೂರು ಬೀಡಿನಿಂದ ಉಳ್ಳಾಕುಲು ಭಂಡಾರ ಹೊರಟು, ಬಳಿಕ ಉಳ್ಳಾಕುಲು ಮತ್ತು ಕಾಜುಕುಜುಂಬ ನೇಮ, ಕೈಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಮಾ. 16 ರಂದು ಇಷ್ಟದೇವತೆ ನೇಮೋತ್ಸವ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಮಾ. 17 ರಂದು ಬೆಳಿಗ್ಗೆ ನಾಗತಂಬಿಲ, ಮುಹೂರ್ತ ತೋರಣ , ಮಧ್ಯಾಹ್ನ ಎಣ್ಮೂರು ಕಟ್ಟಬೀಡುವಿನಿಂದ ಪೂರ್ವಸಂಪ್ರದಾಯದಂತೆ ಭಂಡಾರ ಹೊರಟು, ಗರಡಿಯಲ್ಲಿ ದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 9.00 ಗಂಟೆಗೆ ಬೈದರುಗಳು ಗರಡಿ ಇಳಿದು, ಬಳಿಕ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶಿಸಿ, ಪ್ರಾತಃಕಾಲ ಬೈದೇರುಗಳು ಕಟ್ಟ ಬೀಡಿಗೆ ಬಂದು ಹಾಲು ಕುಡಿದು, ಬೀಡಿಗೆ ಕಾಣಿಕೆ ಅರ್ಪಿಸಲಾಯಿತು. ಬಳಿಕ ಕೋಟಿಚೆನ್ನಯರ ದರ್ಶನ ರಂಗಸ್ಥಳದಲ್ಲಿ (ಸೇಟು) ಬೈದೇರುಗಳ ಸೇಟು, ಬೈದೇರುಗಳಲ್ಲಿ ಅರಿಕೆ, ಗಂಧಪ್ರಸಾದ, ತುಲಾಭಾರ ಕಾರ್ಯಕ್ರಮ ನಡೆಯಿತು.
ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡುರವರ ನೇತೃತ್ವದಲ್ಲಿ ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದಿರೆ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು. ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಬೈದರುಗಳ ಪ್ರಸಾದ ಸ್ವೀಕರಿಸಿದರು. (ಚಿತ್ರಕೃಪೆ: ಮಿಂಚು ಸ್ಟುಡಿಯೋ ನಿಂತಿಕಲ್ಲು)