
ಏನೆಕಲ್ಲು ಗ್ರಾಮದ ಪರಮಲೆ ವೆಂಕಟ್ರಮಣ ಗೌಡವರು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಾಗವೇಣಿ ಪಿ., ಪುತ್ರರಾದ ಶಿವಪ್ರಸಾದ್ ಪಿ.ವಿ., ರಕ್ಷಿತ್ ಪಿ.ವಿ.,ಪುತ್ರಿ ಜಯಶ್ರೀ ಪಿ.ವಿ. ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.