ಹೈಕೋರ್ಟ್ ನಲ್ಲಿ ಹಿಜಾಬ್ ಕುರಿತ ಬಂದಿರುವ ತೀರ್ಪಿನ ಕುರಿತು, ಮುಸ್ಲಿಂ ಸಮುದಾಯದ ವಿವಿಧ ಸಂಘ ಸಂಸ್ಥೆಗಳು ಇಂದು ಸ್ವಯಂಪ್ರೇರಿತ ಬಂದ್ ಕರೆ ನೀಡಿದ್ದು ಸುಳ್ಯದಲ್ಲೂ ಕೂಡ ಮುಸ್ಲಿಂ ಸಮುದಾಯ ಬೆಂಬಲ ಸೂಚಿಸಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ಸುಳ್ಯದ ಗಾಂಧಿನಗರ ಸಂಪೂರ್ಣ ಬಿಕೋ ಎನ್ನುತ್ತಿದೆ. ಬಾಳೆಮಕ್ಕಿ, ಶ್ರೀರಾಮ ಪೇಟೆ, ಹಳೆಗೇಟು, ಪೈಚಾರು, ಕುರುಂಜಿಭಾಗ್, ಜೂನಿಯರ್ ಕಾಲೇಜು ರಸ್ತೆ ಸೇರಿದಂತೆ ಹಲವಾರು ಕಡೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ತಮ್ಮ ವ್ಯಾಪಾರ ಮಳಿಗೆಗಳನ್ನು ಬಂದ್ ಮಾಡಿದ್ದಾರೆ.
- Thursday
- November 21st, 2024