ನಲವತ್ತು ವರ್ಷಗಳ ಇತಿಹಾಸ ಹೊಂದಿರುವ ಗಾಂಗೇಯ ಕ್ರಿಕೆಟರ್ಸ್ ಸುಬ್ರಹ್ಮಣ್ಯ ವತಿಯಿಂದ ದಿ.ಕೃಷ್ಣಕುಮಾರ್ ರುದ್ರಪಾದ ಅವರ ಸ್ಮರಣಾರ್ಥ ಮಾ.19 ಮತ್ತು ಮಾ.20 ರಂದು ಕುಮಾರಧಾರ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಪ್ರತಿಷ್ಠಿತ 20 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಗಾಂಗೇಯ ಟ್ರೋಫಿ 2022 ನಡೆಯಲಿದ್ದು,
ಮಾ.19 ರಂದು ಬೆಳಿಗ್ಗೆ 10:30 ಕ್ಕೆ ಗಾಂಗೇಯ ಕ್ರಿಕೆಟರ್ಸ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೆ.ಎಸ್.ಎಸ್.ಟಿ ಸುಬ್ರಹ್ಮಣ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ನಿಂಗಯ್ಯ ಹಾಗೂ ಗಾಂಗೇಯದ ಸ್ಥಾಪಕ ಕಫ್ತಾನ ಶ್ರೀ ಸರ್ವೋತ್ತಮ ಕಾಮತ್ ಇವರುಗಳು ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಗಾಂಗೇಯದ ಹಿರಿಯ ಆಟಗಾರರಾದ ಸುಬ್ರಹ್ಮಣ್ಯ ಕಾಮತ್ ಸಮವಸ್ತ್ರ ವಿತರಣೆ ಮಾಡಲಿದ್ದಾರೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಗಾಂಗೇಯ ಕ್ರಿಕೆಟರ್ಸ್ ನ ನಾಯಕರಾದ ಪ್ರಕಾಶ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ಲ.ಪ್ರೋ.ಕೆ.ಆರ್ ಶೆಟ್ಟಿಗಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್.ಎಸ್ ಇಂಜಾಡಿ,
ಕೆ.ಎಸ್.ಎಸ್.ಟಿ ನಿಕಟಪೂರ್ವ ಶಿಷ್ಟಾಚಾರ ಅಧಿಕಾರಿಗಳಾದ ಎ.ವೆಂಕಟ್ರಾಜ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಪೂರ್ವಾಧ್ಯಕ್ಷರಾದ ಲೋಕೇಶ್.ಬಿ.ಎನ್, ಉದ್ಯಮಿ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಆನಂದ ದೇವರಗದ್ದೆ, ಗಾಂಗೇಯ ತಂಡದ ಮಾಜಿ ನಾಯಕರಾದ ರಾಧಾಕೃಷ್ಣ ಮಲೆಯಾಳ, ಕರ್ನಾಟಕ ರಕ್ಷಣಾ ವೇದಿಕೆ ಸುಬ್ರಹ್ಮಣ್ಯದ ಅಧ್ಯಕ್ಷರಾದ ಜಗದೀಶ್ ಪಡ್ಪು, ಉದ್ಯಮಿ ದೀಪಕ್.ಎಚ್.ಬಿ, ಕೃಷ್ಣಪ್ರಸಾದ್ ಕೆ.ಜಿ ಭಟ್ ವಳಲಂಬೆ, ಶ್ರೀರಾಮ ಕ್ರಿಕೆಟರ್ಸ್ ಪೆರ್ಜಿ ಇದರ ಅಧ್ಯಕ್ಷ ಉದಯ ಭಟ್ ಪೆರ್ಜಿ, ಶೋಬಿತ್ ಶೆಟ್ಟಿ ಕುಮಾರಧಾರ, ಮನೋಹರ ಒಂಟೆಗುಂಡಿ, ವಿಘ್ನೇಶ್ ಕುಮಾರ್ ಅಗ್ರಹಾರ ಇವರುಗಳು ಉಪಸ್ಥಿತರಿರುವರು.
ಮಾ.20 ರಂದು ಸಂಜೆ 6:30 ಕ್ಕೆ ಗಾಂಗೇಯ ಟ್ರೋಫಿ 2022ರ ಸಮಾರೋಪ ಸಮಾರಂಭ ಗಾಂಗೇಯ ಕ್ರಿಕೆಟರ್ಸ್ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಚಾಂಪಿಯನ್ ಪುರಸ್ಕಾರ ಪ್ರಧಾನ ಮಾಡಲಿದ್ದು, ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಇಲ್ಲಿನ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಚಾಂಪಿಯನ್ ಚೆಕ್ ಹಸ್ತಾಂತರ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಡಾ.ರವಿ ಕಕ್ಕೆಪದವು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯದ ಪ್ರಾಚಾರ್ಯರಾದ ಡಾ.ಗೋವಿಂದ.ಎನ್.ಎಸ್ ಅವರು ಸನ್ಮಾನಿಸಲಿದ್ದಾರೆ.
ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ, ಸುಬ್ರಹ್ಮಣ್ಯ ಇದರ ಅಧ್ಯಕ್ಷ ರೋ. ಉಮೇಶ್.ಕೆ.ಎನ್, ಗಾಂಗೇಯ ತಂಡದ ಮಾಜಿ ಆಟಗಾರ ಎಂ.ಹರೀಶ್ ಕಾಮತ್, ಗಿರಿಧರ ಸ್ಕಂದ, ಗಾಂಗೇಯ ತಂಡದ ಹಿರಿಯ ಆಟಗಾರ ಎಂ.ಸತೀಶ್ ಕಾಮತ್, ರಾಜೇಶ್.ಎನ್.ಎಸ್, ಗಾಂಗೇಯ ತಂಡದ ಮಾಜಿ ನಾಯಕ ದಿನೇಶ್.ಬಿ.ಎನ್ ಇವರುಗಳು ಬಹುಮಾನ ವಿತರಣೆ ಮಾಡಲಿದ್ದಾರೆ.
ಈ ಪಂದ್ಯಾಟದ ಮುಖ್ಯ ಅತಿಥಿಗಳಾಗಿ ಉದ್ಯಮಿ ಭವಾನಿಶಂಕರ ಮಲ್ಲಿಗೆಮಜಲು, ದಾನಿಗಳಾದ ವಸಂತ ಶರ್ಮಾ ಆದಿ ಸುಬ್ರಹ್ಮಣ್ಯ, ಗುತ್ತಿಗೆದಾರರಾದ ಲೋಕೇಶ್ ಹಾಸನ, ಉದ್ಯಮಿ ಆಕಾಶ್, ಗಾಂಗೇಯ ಕ್ರಿಕೆಟರ್ಸ್ ನಾಯಕರಾದ ಪ್ರಕಾಶ್ ಸುಬ್ರಹ್ಮಣ್ಯ ಉಪಸ್ಥಿತರಿರುವರು.
ಈ ಪಂದ್ಯಾಟದ ಗೌರವ ಉಪಸ್ಥಿತರಾಗಿ ಗಾಂಗೇಯ ತಂಡದ ಮಾಜಿ ನಾಯಕ ಸುಬ್ರಹ್ಮಣ್ಯ ಶಬರಾಯ, ಗಾಂಗೇಯದ ಹಿರಿಯ ಕೀಪರ್ ಬಾಲಸುಬ್ರಹ್ಮಣ್ಯ ಭಟ್, ಗಾಂಗೇಯದ ಮಾಜಿ ನಾಯಕ ಶಿವಕುಮಾರ್ ಕಾಮತ್, ಗಾಂಗೇಯ ತಂಡದ ತಂಡದ ಹಿರಿಯ ಆಟಗಾರರಾದ ಪ್ರಮೋದ್ ಕುಮಾರ್.ಎಸ್, ರಾಮಕೃಷ್ಣ ಭಟ್, ಸುದರ್ಶನ್ ಆಚಾರ್, ಶ್ರೀ ಸುಭಾಷ್ ರೈ ಉಪಸ್ಥಿತರಿರುವರು.
ಈ ಕ್ರಿಕೆಟ್ ಪಂದ್ಯಾಟದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರು, ಸರ್ವ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗ ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ, ಠಾಣಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಆರಕ್ಷಕ ಠಾಣೆ ಸುಬ್ರಹ್ಮಣ್ಯ, ಅಕ್ಷರ ಕ್ರಿಕೆಟರ್ಸ್ ಸುಬ್ರಹ್ಮಣ್ಯ, ಅಶ್ವಮೇಧ ಕ್ರಿಕೆಟರ್ಸ್ ಸುಬ್ರಹ್ಮಣ್ಯ, ಯತೀಶ್ ಪುತ್ತೂರು(ಚಿತ್ತಾರ ಸೈನ್ ಗ್ಯಾಲರಿ ಪುತ್ತೂರು) ಹಾಗೂ ಕೃಷ್ಣಪ್ಪ ಸ್ಕಂದ, ಸುಬ್ರಹ್ಮಣ್ಯ ಮಾನಾಡು, ರಾಜೇಶ್, ದಿನೇಶ್ ಮಾನಾಡು ಸರ್ವ ಸದಸ್ಯರು ಹಾಗೂ ಅಭಿಮಾನಿಗಳು ಗಾಂಗೇಯ ಕ್ರಿಕೆಟರ್ಸ್ ಸುಬ್ರಹ್ಮಣ್ಯ ಇವರುಗಳು ಸಂಪೂರ್ಣ ಸಹಕಾರ ನೀಡಲಿದ್ದಾರೆ.
ಗಾಂಗೇಯ ಟ್ರೋಫಿ 2022 ರ ಪ್ರಥಮ ಬಹುಮಾನ 40,000 ನಗದು ಬಹುಮಾನ ಹಾಗೂ ಗಾಂಗೇಯ ಟ್ರೋಫಿ, ದ್ವಿತೀಯ ಬಹುಮಾನ 25,000 ನಗದು ಹಾಗೂ ಗಾಂಗೇಯ ಟ್ರೋಫಿ, ತೃತೀಯ ಬಹುಮಾನ 5,000 ನಗದು ಹಾಗೂ ಗಾಂಗೇಯ ಟ್ರೋಫಿ, ಚತುರ್ಥ ಬಹುಮಾನ 5,000 ನಗದು ಹಾಗೂ ಗಾಂಗೇಯ ಟ್ರೋಫಿ ಇರಲಿದ್ದು, ಹಲವಾರು ವೈಯುಕ್ತಿಕ ಬಹುಮಾನಗಳು ಕೂಡ ಇರಲಿವೆ.
ವರದಿ :- ಉಲ್ಲಾಸ್ ಕಜ್ಜೋಡಿ