Ad Widget

ರಂಗಸ್ಥಳದಲ್ಲಿ ಕುಸಿದು ಬಿದ್ದು ಗಾಯಗೊಂಡ ಜಯಾನಂದ ಸಂಪಾಜೆ – ಸಹಾಯ ಮಾಡುವಂತೆ ಯಕ್ಷಗಾನ ಅಭಿಮಾನಿಗಳಲ್ಲಿ ಮನವಿ

ಜಯಾನಂದ ಸಂಪಾಜೆಯಾದ ನಾನು ಈ ವರ್ಷದ ತಿರುಗಾಟದಲ್ಲಿ ಬಪ್ಪನಾಡು ಮೇಳದಲ್ಲಿ ಕಲಾವಿದನಾಗಿದ್ದೇನೆ. ದಿನಾಂಕ 17.02.2022 ರಂದು ನಾರಾವಿಯಲ್ಲಿ ಬಪ್ಪನಾಡು ಮೇಳದವರಿಂದ ” ನಾಗತಂಬಿಲ ” ತುಳು ಯಕ್ಷಗಾನ ಪ್ರದರ್ಶನದಲ್ಲಿ ನನ್ನದು ಕಥಾನಕದ ಧನರಾಜ ಎಂಬ ನಾಯಕನ ಪಾತ್ರ . ಈ ಸಂದರ್ಭದಲ್ಲಿ ಧಿಗಿಣ ತೆಗೆಯುವಾಗ ನಾನು ರಂಗಸ್ಥಳದಲ್ಲೇ ಕುಸಿದು ಬಿದ್ದೆ .ಕಾಲಿನಲ್ಲಿ ತೀವ್ರವಾದ ನೋವಿದ್ದರೂ ಸಾವರಿಸಿಕೊಂಡು ಪ್ರಸಂಗದ ಪ್ರಧಾನ ಪಾತ್ರವಾದ ಕಾರಣ , ಅದೇ ಸ್ಥಿತಿಯಲ್ಲೇ ಮುಂದಿನ 15 ನಿಮಿಷಗಳ ಕಾಲ ರಂಗಸ್ಥಳದಲ್ಲೇ ಉಳಿದು ಪಾತ್ರ ನಿರ್ವಹಿಸಿದೆ . ನಂತರ ರಂಗಸ್ಥಳದಿಂದ ಮುಂದಿನ ಸನ್ನಿವೇಶಕ್ಕಾಗಿ ನಿರ್ಗಮಿಸಿದರೂ , ನಂತರದ ಸನ್ನಿವೇಶದಲ್ಲಿ , ನನ್ನಿಂದಾಗಿ ಪ್ರಸಂಗ ನಿಲ್ಲಕೂಡದು ಎಂಬ ಉದ್ದೇಶದಿಂದ , ಮುಕ್ಕಾಲು ಘಂಟೆಗಳಷ್ಟು ನನ್ನ ಪಾತ್ರವನ್ನು ನಿರ್ವಹಿಸಿದೆ . ನಂತರ ನನ್ನನ್ನು ರಂಗಸ್ಥಳದಿಂದ ಎತ್ತಿಕೊಂಡು ಚೌಕಿಗೆ ತರಬೇಕಾಯಿತು .ತೀವ್ರವಾದ ಕಾಲು ನೋವಿನಿಂದಾಗಿ ಆಸ್ಪತ್ರೆಗೆ ದಾಖಲಾದಾಗ ಕಾಲ್ಮುರಿತಕ್ಕೆ ಒಳಗಾದುದು ತಿಳಿದು ಬಂತು .
ಪರಿಣತ ವೈದ್ಯರು ಪರೀಕ್ಷಾ ವರದಿಯಂತೆ ನನ್ನ ಕಾಲಿಗೆ ಸರ್ಜರಿಗೆ ಮಾಡಬೇಕಾಗುತ್ತದೆ ಮಾತ್ರವಲ್ಲ , ಆರು ತಿಂಗಳ ಕಾಲ ಬೆಡ್ ರೆಸ್ಟ್ ಬೇಕಾಗಿದೆ ಎಂದು ತಿಳಿಸಿದರು . ಇದೀಗ ನಾನು ಯಕ್ಷಗಾನ ಪೋಷಕರಾದ ಡಾ. ಭಾಸ್ಕರಾನಂದ ಕುಮಾರರ ಸಹಕಾರದಿಂದ ಉಡುಪಿಯ HI TECH ಆಸ್ಪತ್ರೆಗೆ ದಾಖಲಾಗಿ ಮೊನ್ನೆ ತಾನೇ ( 15.03.2022 ರಂದು ) ಕಾಲಿಗೆ ಸರ್ಜರಿ ಮಾಡಿಸಿ , ಇದೀಗ ICU ,ನಿಂದ GENERAL ವಾರ್ಡಿಗೆ ಶಿಪ್ಟ್ ಆಗಿದ್ದೇನೆ .
ವೈದ್ಯರು ತಿಳಿಸಿದಂತೆ ಈ ಸರ್ಜರಿಗೆ ಮೂರು ಲಕ್ಷದಷ್ಟು ವೆಚ್ಚ ಬೇಕಾಗಿದೆ . ಇದನ್ನು ಭರಿಸಲಾಗದ ದುಸ್ಥಿತಿ ನನ್ನದು . ಈಗಾಗಲೇ ಒಂದು ತಿಂಗಳು ಹಾಗೂ ಮುಂದಿನ ಆರು ತಿಂಗಳ ಕಾಲ ನಡೆಯಲಾಗದ ಪರಿಸ್ಥಿತಿಯಾದ ಕಾರಣ , ನನಗೆ ನನ್ನ ಮುಂದಿನ ಜೀವನದ ಬಗ್ಗೆ ತುಂಬಾ ಆತಂಕವಾಗಿದೆ . ಯಾವುದೇ ಕೆಲಸ ಮಾಡಲೂ ಆಗದ ಪರಿಸ್ಥಿತಿ . ಈಗಾಗಲೇ ಕೊರೋನಾದ ಕಾರಣದಿಂದಾಗಿ ಎರಡು ವರ್ಷಗಳಿಂದ ಯಾವುದೇ ವರಮಾನವಿಲ್ಲದೇ ಇದೀಗ ಪರಿಸ್ಥಿತಿ ತಿಳಿಯಾಗುವಷ್ಟರಲ್ಲಿ ವಿಧಿಯು ನನ್ನ ಮೇಲೆ ಕೆಟ್ಟ ಧೃಷ್ಠಿ ಬೀರಿದೆ . ಯಕ್ಷಗಾನವನ್ನೇ ನಂಬಿ , ಯಕ್ಷಗಾನವೇ ನನ್ನ ಜೀವನೋಪಾಯ ಎಂದು ನಂಬಿಕೊಂಡ ನನ್ನ ಮೇಲೆ ಈಗಿನ ಸಂದರ್ಭ ತುಂಬಾ ಆಘಾತ ತಂದಿದೆ . ದ್ವಿತೀಯ ಬಿ.ಕಾಂ .
ವಿದ್ಯಾರ್ಥಿನಿಯಾದ ನನ್ನಮಗಳು , ಪ್ರಥಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಮಗ – ಇವರ ವಿದ್ಯಾಭ್ಯಾಸದ ಹೊಣೆಗಾರಿಕೆಯೂ ನನ್ನ ಮೇಲಿದೆ . ಇದರೊಂದಿಗೆ ಮನೆ ಕಟ್ಟಲು ಪಡೆದ ದೊಡ್ಡ ಮೊತ್ತದ ಸಾಲದ ಹೊರೆಯೂ ನನ್ನ ಮೇಲಿದೆ ‌. ಈಗಾಗಲೇ ಕಂತು ಕಟ್ಟದೇ ಹಲವು ತಿಂಗಳುಗಳೇ ಆಯಿತು . ಇನ್ನು ಆರು ತಿಂಗಳ ಕಾಲ ಏನನ್ನೂ ಮಾಡಲಾಗದ ದುರ್ವಿಧಿ ನನ್ನದಾಗಿದೆಯಾದ ಕಾರಣ , ಜೀವನೋಪಾಯಕ್ಕಾಗಿ ಏನು ? ಮಕ್ಕಳ ವಿದ್ಯಾಭ್ಯಾಸದ ಭವಿಷ್ಯ ಏನು ? ಎಂಬ ಚಿಂತೆ ನನ್ನನ್ನು ಗಾಢವಾಗಿ ಕಾಡುತ್ತಿದೆ .

. . . . . . .

ಸಹೃದಯೀ ಕಲಾಭಿಮಾನಿಗಳಲ್ಲಿ ನನ್ನದೊಂದು ವಿನಮ್ರ ವಿನಂತಿ : ನಾನು 32 ವರ್ಷಗಳ ಕಾಲ ಕಟೀಲು , ಕುಂಟಾರು , ಎಡನೀರು , ಹೊಸನಗರ , ಹನುಮಗಿರಿ ಮುಂತಾದ ವಿವಿಧ ಮೇಳಗಳಲ್ಲಿ ತಿರುಗಾಟ ನಡೆಸಿದ್ದೇನೆ . ಆದರೆ , ಇಷ್ಟರ ತನಕ ಯಾರಲ್ಲೂ , ಏನನ್ನೂ ಯಾಚಿಸಿದವನಲ್ಲ , ದೇಹೀ ಎಂದವನಲ್ಲ . ಆದರೆ , ನನ್ನ ದುರ್ವಿಧಿಯು ನನ್ನ ಆತ್ಮಾಭಿಮಾನವನ್ನೇ ಬದಿಗೆ ಸರಿಸುವಂತೆ ಮಾಡಿದೆ . ಯಕ್ಷಗಾನದ ಅಭಿಮಾನಿಗಳೇ ಈಗ ನನ್ನ ದೊಡ್ಡ ಆಸರೆಯಾಗಬೇಕಾಗಿದೆ . ದಯವಿಟ್ಟು , ಯಕ್ಷಗಾನದ ಹಾಗೂ ನನ್ನ ಅಭಿಮಾನಿಗಳು ಈ ಸಂದರ್ಭದಲ್ಲಿ ನನಗೆ ತಮ್ಮ ಉದಾರ ಹಸ್ತಗಳಿಂದ ನೆರವಾಗಬೇಕಾಗಿ ಕಳಕಳಿಯಿಂದ ವಿನಂತಿಸುತ್ತಿದ್ದೇನೆ . ನೀವು ನನಗೆ ನೀಡುವ ನೆರವು ಒಬ್ಬ ಕಲಾವಿದನ ಕುಟುಂಬಕ್ಕೆ ಆಧಾರವಾಗುತ್ತದೆ ಎಂಬ ನೆಲೆಯಲ್ಲಿ ಸ್ಪಂದಿಸಬೇಕಾಗಿ ವಿನಂತಿ .
ನನ್ನ ಬ್ಯಾಂಕ್ ಖಾತೆಯ ವಿವರ ಈ ಕೆಳಗಿನಂತಿದೆ . ಸಹೃದಯೀ ಕಲಾಭಿಮಾನಿಗಳಾದ ತಾವು , ನನ್ನ ಈ ಸಂಕಷ್ಟದ ಕಾಲದಲ್ಲಿ ನೆರವಾಗುತ್ತೀರಿ ಎಂಬ ಆಶಾವಾದ ಹೊಂದಿದ್ದೇನೆ .

       ತಮ್ಮವನೇ ಆದ,  ಜಯಾನಂದ ಸಂಪಾಜೆ

ಯಕ್ಷಗಾನ ಕಲಾವಿದ
Mobile number : 9731435243

*ಬ್ಯಾಂಕ್ ಖಾತೆ ವಿವರ* 

Jayananda S T
Canara bank Sampaje
A/c no 0643101006611
IFSC code CNRB 0000643

Google account : 9731435243

Phone pay : 9731435243

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!