ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಣ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ಜರುಗಿತು . ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಜ್ಯೋತಿಷಿ ಮತ್ತು ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು . ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಉಮಾ ರವರು ಉದ್ಘಾಟಿಸಿದರು . ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧಕ ಮಹಿಳೆಯರಾದ ಝಕೀರಾ ಷರೀಫ್ ಮತ್ತು ಶ್ರೀಮತಿ ಲತಾ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .ಗಾಯಕರಾದ ಹರ್ಷಿತಾ ಕೆ ಎಸ್ ಸುಳ್ಯ , ಶೀಲಾ ಪಡೀಲ್ ಮಂಗಳೂರು , ಫಾತಿಮತ್ ಜೈಬಾ ಮತ್ತು ಸ್ನಿಗ್ಧ ಎನ್ ಎಸ್ ಸುಳ್ಯ ರವರು ದೇವಿಯ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು . ರಮ್ಲತ್ ಬೀಬಿ ರಶೀದ್ ರವರು ಮಹಿಳಾ ಕಾನೂನು ವಿಚಾರವಾಗಿ ಮಾತನಾಡಿದರು. ನಾರಿಯ ಬದುಕು ಎಂಬ ವಿಷಯ ಕುರಿತ ಕವಿಗೋಷ್ಠಿಯಲ್ಲಿ ಪೂರ್ಣಿಮಾ ಪೆರ್ಲಂಪಾಡಿ , ಪರಿಮಳ ಐವರ್ನಾಡು , ಸುಮಂಗಲಾ ಲಕ್ಷ್ಮಣ್ , ಶ್ರೀಮತಿ ಭಾರತಿ ಜಯನಗರ , ಅಪೂರ್ವ ಕಾರಂತ್ ಪುತ್ತೂರು , ವಿಭಾ ಭಟ್ ಮತ್ತು ಸೌಮ್ಯ ಸಿ ಡಿ ಸುಳ್ಯ ರವರು ಸ್ವರಚಿತ ಕವನಗಳನ್ನು ವಾಚನ ಮಾಡಿದರು .ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹ ಸಂಚಾಲಕರಾದ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಪ್ರಾಸ್ತಾವಿಕ ಮಾತನಾಡಿದರು . ಪರಿಮಳ ಐವರ್ನಾಡು ಸ್ವಾಗತಿಸಿದರು . ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಮಂಗಲಾ ಲಕ್ಷ್ಮಣ್ ಕೋಳಿವಾಡ ರವರು ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು . ಪತ್ರಕರ್ತ ರಶೀದ್ ಬೆಳ್ಳಾರೆ ಸಹಕರಿಸಿದರು . ಲೀಲಾವತಿ ದೇವರಗುಂಡ ಮತ್ತು ಪುಷ್ಪಾವತಿ ರವರು ಉಪಸ್ಥಿತರಿದ್ದರು .
- Monday
- November 25th, 2024