ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ವತಿಯಿಂದ ಕಳಂಜ ಒತ್ತೆಕೋಲವು ಮಾ.19 ಮತ್ತು ಮಾ.20 ರಂದು ನಡೆಯಲಿದೆ.
ಮಾ.19 ರಂದು ಸಂಜೆ ಗಂಟೆ 6.00 ಕ್ಕೆ ಸ್ಥಾನದಿಂದ ಭಂಡಾರ ತೆಗೆಯುವುದು.
ರಾತ್ರಿ ಗಂಟೆ 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, ಗಂಟೆ 9.00 ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 11.00 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಲಿದೆ.
ಮಾ.20 ರಂದು ಪ್ರಾತ:ಕಾಲ ಗಂಟೆ 5.00 ಕ್ಕೆ ದೈವದ ಅಗ್ನಿಪ್ರವೇಶ, ಬೆಳಿಗ್ಗೆ ಗಂಟೆ 6.00 ಕ್ಕೆ ಮಾರಿಕಳ, 7.00 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ ಗಂಟೆ 9.00 ಕ್ಕೆ ಮುಳ್ಳುಗುಳಿಗ ದೈವದ ನೇಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾ.19 ರಂದು ರಾತ್ರಿ ಗಂಟೆ 8.30 ರಿಂದ ಶ್ರೀ ಮಹಾವಿಷ್ಣು ಯಕ್ಷಕೂಟ ಕಳಂಜ ಇದರ ವಿದ್ಯಾರ್ಥಿಗಳಿಂದ ತುಳು ಯಕ್ಷಗಾನ ಕೋಟಿ – ಚೆನ್ನಯ ನಡೆಯಲಿದೆ.
ರಾತ್ರಿ ಗಂಟೆ 1.00 ರಿಂದ ತುಳುನಾಡ ಗಾನ ಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ, ದಾಸರಪದಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.