ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್. (ರಿ) ಸುಳ್ಯ ತಾಲೂಕು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಸುಬ್ರಹ್ಮಣ್ಯ ವಲಯ, ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿ ಕೊಲ್ಲಮೊಗ್ರು ಹಾಗೂ ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಇವುಗಳ ಸಂಯುಕ್ತಾಶ್ರಯದಲ್ಲಿ ಮಾ.12 ರಂದು ಕೊಲ್ಲಮೊಗ್ರು ಶ್ರೀ ಮಯೂರ ಕಲಾಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ದೊಡ್ಡಣ್ಣ ಶೆಟ್ಟಿ ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಕೆರೆಗೆ ಗಂಗಾಪೂಜೆ ನೆರವೇರಿಸಲಾಯಿತು. ನಂತರ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಅವರು ನಾಮಫಲಕ ಅನಾವರಣಗೊಳಿಸಿದರು.
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳು ಪುತ್ತೂರು ಇಲ್ಲಿನ ಉಪನ್ಯಾಸಕರಾದ ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯರು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದಿನ ದಿನದಲ್ಲಿ ಹಣ, ಶ್ರೀಮಂತಿಕೆ ಶಾಶ್ವತವಲ್ಲ. ಜೀವನದಲ್ಲಿ ಒಳ್ಳೆಯ ಸಂಸ್ಕಾರ ಧರ್ಮವನ್ನು ಅರಿತುಕೊಂಡು ಜೀವನ ಮಾಡಿದರೆ ಮುಂದಿನ ಜೀವನ ಅತ್ಯಂತ ಸುಖಮಯವಾಗಿ ನಡೆಸಬಹುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ದ.ಕ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮಾತನಾಡುತ್ತಾ ಕೊಲ್ಲಮೊಗ್ರು ಗ್ರಾಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೊಡ್ಡಣ್ಣ ಶೆಟ್ಟಿ ಕೆರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಅಭಿವೃದ್ಧಿಪಡಿಸಿದ್ದು, ಈ ಕೆರೆಯ ಪ್ರಯೋಜನವನ್ನು ಊರಿನವರು ಪಡೆದುಕೊಂಡು ಕೆರೆಯನ್ನು ಉಳಿಸುವಲ್ಲಿ ತಮ್ಮ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಕೊಲ್ಲಮೊಗ್ರು ಇದರ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ನಮ್ಮೂರು ನಮ್ಮ ಕೆರೆ ಸಮಿತಿ ಅಧ್ಯಕ್ಷರಾದ ಮಾಧವ ಚಾಂತಾಳ ಉಪಸ್ಥಿತರಿದ್ದರು. ಗೌರವ ಉಪಸ್ಥಿತರಾಗಿ ಪ್ರಗತಿಪರ ಕೃಷಿಕರಾದ ಭವಾನಿಶಂಕರ ಪಿಂಡಿಮನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಚೆನ್ನಕೇಶವ, ಸುಬ್ರಹ್ಮಣ್ಯ ವಲಯಾಧ್ಯಕ್ಷರಾದ ಬಾಲಸುಬ್ರಮಣ್ಯ ಎಲ್ಲಪಡ್ಕ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಚೆನ್ನಕೇಶವ ಅವರು ಸ್ವಾಗತಿಸಿ, ಸೇವಾ ಪ್ರತಿನಿಧಿ ಸಾವಿತ್ರಿ ವಂದನಾರ್ಪಣೆಗೈದರು. ನ್ಯಾಯವಾದಿ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಆಂತರಿಕ ಲೆಕ್ಕಪರಿಶೋಧಕರಾದ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರು ಹಾಗೂ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಾಧವ ಚಾಂತಾಳ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಕಮಲಾಕ್ಷ ಮುಳ್ಳುಬಾಗಿಲು ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳನ್ನು ಗೌರವಿಸಲಾಯಿತು.
ಹಾಗೂ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ದ.ಕ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಸೀತಾರಾಮ್, ಲೆಕ್ಕಪರಿಶೋಧಕರಾದ ಉಮೇಶ್, ಸೇವಾ ಪ್ರತಿನಿಧಿ ಸಾವಿತ್ರಿ ಹಾಗೂ ಶೋಭಾ ಇವರುಗಳನ್ನು ಗೌರವಿಸಲಾಯಿತು.
ವರದಿ :- ಉಲ್ಲಾಸ್ ಕಜ್ಜೋಡಿ