ಚೊಕ್ಕಾಡಿ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಕಾವಿ ಬಳಸಿ ಮತ ಕೇಳಿದ್ದ ವಿಚಾರದ ಕುರಿತು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವರು ಮಾ.12 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೇಸರಿ ಶಾಲ್ ನ್ನು ಸ್ವಾರ್ಥಕ್ಕೆ ಬಳಸಬೇಡಿ. ಸಹಕಾರಿ ಸಂಘದ ಚುನಾವಣೆಯಲ್ಲಿ ಬಳಸಿದ್ದು ಸರಿಯಲ್ಲ. ಏಕೆಂದರೆ ಕಾವಿ ಮತ್ತು ಭಗವದ್ಗೀತೆ ಇವೆರಡು ಹಿಂದುತ್ವದಲ್ಲಿ ಪವಿತ್ರವಾದದ್ದು ಎಂದರು. ಕಾವಿ ಧಾರ್ಮಿಕ ಸಮಾರಂಭಗಳಲ್ಲಿ ಬಳಸಿದರೆ ಅರ್ಥವಿರುವುದರಿಂದ ರಾಜಕೀಯ ಪಕ್ಷಗಳಿಗೆ ಅದರದೇ ಆದ ಚಿಹ್ನೆಗಳಿದ್ದು ಅದನ್ನು ಬಳಕೆ ಮಾಡಲಿ. ಹಾಗೆಯೇ ಯುವಕರ ಮೇಲೆ ಕೇಸರಿ ಒಲವು ತೋರಿಸಿ ಯುವ ಜನತೆಯ ಚಿಂತನೆ ಬೇರೆಡೆಗೆ ತಿರುಗಿಸುವಂತೆ ಮಾಡಬಾರದು ಹೇಳಿದರು. ಈ ರೀತಿಯ ಘಟನೆಗಳು ಕಂಡು ಬಂದರೆ ಸಂಘಟನೆ ಮಾಡಿ ಪ್ರತಿಭಟನೆ ನಡೆಸುತ್ತೇವೆ ಹಾಗೂ ಮತದ ಸಮಯದಲ್ಲಿ ಬೇರೆ ಸಂಘಟನೆಗಳು ಕಾವಿ ಬಳಸಿದರೆ ನಾವು ಸಹಾ ಬಳಸುತ್ತೇವೆ. ಅಲ್ಲದೇ ಈ ವಿಚಾರದ ಕುರಿತು ಹರೀಶ್ ಕಂಜಿಪಿಲಿ ಸಭೆ ನಡೆಸಿ ಚರ್ಚೆ ಮಾಡಬೇಕು ಎಂದು ವಿನಂತಿಸಿದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಭವಾನಿ ಶಂಕರ ಕಲ್ಮಡ್ಕ, ಅಶೋಕ್ ಚೂಂತಾರು,ರವಿ ಅಕ್ಕೋಜಿಪಾಲ್, ನಂದರಾಜ್ ಸಂಕೇಶ, ಪವನ್ ಮುಂಡ್ರಾಜೆ ಉಪಸ್ಥಿತರಿದ್ದರು.
- Thursday
- November 21st, 2024