
ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನಿರ್ಮಿಸಲಾಗಿದ್ದ ಬಿ ಎಸ್ ಎನ್ ಎಲ್ ಟವರ್ ಮಾ.3 ರಂದು ಕಾರ್ಯಾರಂಭ ಮಾಡಿದೆ. ಗ್ರಾಮದ ಅತೀ ಎತ್ತರದ ಪ್ರದೇಶದಲ್ಲಿರುವ ಈ ಟವರ್ ನಿಂದ ಇದುವರೆಗೂ ಸಿಗ್ನಲ್ ದೊರೆಯದಿದ್ದ ಹಲವು ಸ್ಥಳಗಳಲ್ಲಿ ಅತ್ಯುತ್ತಮ ಮತ್ತು ಅತೀ ವೇಗದ 3ಜಿ ಸಿಗ್ನಲ್ ದೊರೆಯುತ್ತಿದ್ದು ಗ್ರಾಹಕರು ಸಂತುಷ್ಟರಾಗಿದ್ದಾರೆ.
ಟವರ್ ನಿರ್ಮಾಣವಾಗಿ ಹಲವು ಸಮಯ ಕಳೆದರೂ ಕಾರ್ಯಾಚರಣೆ ಆರಂಭಿಸದೆ ನಿರ್ಲಕ್ಷ್ಯ ವಹಿಸಿದ್ದ ಇಲಾಖೆಯ ಮೇಲೆ ಶೀಘ್ರ ಕಾರ್ಯಾಚರಣೆ ಆರಂಭಿಸುವಂತೆ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ಒತ್ತಡ ಹೇರಿದ್ದರು.