ಬಾಲ್ಯದಲ್ಲಿಯೇ ನೃತ್ಯದ ಕಡೆಗೆ ಆಸಕ್ತಿಯನ್ನು ಹೊಂದಿದ್ದ ಶ್ರೇಯಾ ಎಮ್ ಜಿ ಮೇರ್ಕಜೆ ಇವರಿಗೆ ಬೆಂಗಳೂರಿನ ಟಿ ದಾಸರಹಳ್ಳಿ ಜನಸ್ಪಂದನ ಟ್ರಸ್ಟ್ ವತಿಯಿಂದ ಕಲಾ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ 5ನೇ ವರ್ಷದ ಟ್ರಸ್ಟಿನ ವಾರ್ಷಿಕೋತ್ಸವದ ಪ್ರಯುಕ್ತ ಸಾಂಕೃತಿಕ ಸಂಗೀತ,ನೃತ್ಯ,ನಟನೆ ,ಯೋಗ ಭರತನಾಟ್ಯ ಇವರ ಎಲ್ಲ ಟ್ಯಾಲೆಂಟ್ ಗಳನ್ನ ಗುರುತಿಸಿ ಜನಸ್ಪಂದನ ಕಲಾ ಸಿರಿ ರತ್ನ ಬಿರುದು ನೀಡಿ ಸನ್ಮಾನಿಸಿದರು.
ಶ್ರೇಯಾ ಅವರು ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದಾಳೆ. ಈಕೆ ಅಮರ ಮುಡ್ನೂರು ಮೇರ್ಕಜೆಯ ಗುರುಪ್ರಸಾದ್ ಮೇರ್ಕಜೆ ಹಾಗೂ ಪ್ರಮೀಳಾ ಮೇರ್ಕಜೆ ಅವರ ಪುತ್ರಿ.
ಇವಳು ನೃತ್ಯ, ಅಭಿನಯ, ಭರತನಾಟ್ಯ, ಸಂಗೀತ, ಯೋಗ, ಕ್ರೀಡೆ, ನಿರೂಪಣೆ ಇವೆಲ್ಲದರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ. ಇವಳು ಏಳು ತಿಂಗಳ ಮಗು ಇರುವಾಗಲೇ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಇವಳ ಕಲಾ ಜರ್ನಿಯು ಪ್ರಾರಂಭವಾಯಿತು. ಸಂತೋಷ್ ಕುಮಾರ್ ಮಂಗಳೂರು ಇವರ ಜೊತೆ ವೇಸ್ಟೆರ್ನ್ ಡಾನ್ಸ್, ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವನ ಜೊತೆ ಭರತನಾಟ್ಯ ಹಾಗೂ ರೇಖಾ ರೇವತಿ ಹೊನ್ನಡಿ ಇವರ ಜೊತೆ ಸಂಗೀತವನ್ನು ಅಭ್ಯಾಸವನ್ನು ಮಾಡುತ್ತಿದ್ದಾರೆ. ಹಾಗೆಯೇ ಇತ್ತೀಚೆಗೆ ಬಿಡುಗಡೆಯಾದ ಗೇನದಾಂತಿ ಉಡಲ್ ಎಂಬ ಕಿರುಚಿತ್ರದಲ್ಲಿ ಅಭಿನಯವನ್ನು ಮಾಡಿದ್ದಾಳೆ ಹಾಗೆಯೇ ಧಾರ್ಮಿಕ ಕಾರ್ಯಕ್ರಮಗಳಾದ ಅಷ್ಟಮಿ, ಚೌತಿ, ದಸರಾ, ನವರಾತ್ರಿ ಇದಕ್ಕೆಲ್ಲ ಮಂಗಳೂರು, ಸುಳ್ಯದ ಹಲವಾರು ಕಡೆ 60 ಕಿಂತಲೂ ಹೆಚ್ಚು ಡಾನ್ಸ್ ಪ್ರೋಗ್ರಾಮ್ ಅನ್ನು ಕೊಟ್ಟಿದಾಳೆ. ಹಾಗೆಯೇ ಮಂಗಳೂರು, ಬೆಂಗಳೂರು, ಗೋವಾ,ಮಡಿಕೇರಿ,ಉಡುಪಿ, ಕಾರ್ಕಳ, ಮೂಡಬಿದ್ರೆ, ಸುಳ್ಯ ಹಲವಾರು ಡ್ಯಾನ್ಸ್ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಯುನಿಕ್ ಫ್ಯಾಶನ್ ಅರ್ಪಿಸುವ ಮಿಸ್ಟರ್ ಟೀನ್ ಕರ್ನಾಟಕ 2022 ಸಂಧರ್ಯ ಸ್ಪರ್ಧೆ ಸೀಸನ್-2 ಗ್ರಾಂಡ್ ಫಿನಲೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.
ನಮ್ಮ ಕುಡ್ಲ ಟ್ಯಾಲೆಂಟ್
ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ನಲ್ಲಿ ಸೆಮಿಫೈನಲ್ ಗೆ ಆಯ್ಕೆಯಾಗಿರುತ್ತಾರೆ.
ಹಾಗೆಯೇ ಹಲವಾರು ಆನ್ಲೈನ್ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಸಹ ಮಾಡಿರುತ್ತಾರೆ.
ರಾಧಾಕೃಷ್ಣ ಆಲ್ಬಮ್ ಸಾಂಗ್ ಮಾಡಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹಾಗೆಯೇ ಕಹಳೆ ನ್ಯೂಸ್ ನಲ್ಲೂ ಇವರು ಸಂದರ್ಶನವನ್ನು ನೀಡಿದ್ದಾರೆ. ಮಂಗಳೂರಿನ ನಮ್ಮ ಕುಡ್ಲ ಚಾನೆಲ್ ಹಾಗೂ ನಮ್ಮ ಟಿವಿ ಚಾನೆಲ್ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ನಮ್ಮ ಟಿವಿ ನಡೆಸಿದ ಜನಧ್ವನಿ ಕಾರ್ಯಕ್ರಮದಲ್ಲಿ ರಾಜ್ಯದ್ಯಂತ ಶಾಲೆಗಳು ಓಪನ್ ಎಂಬ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಹಾಗೂ ಮಂಗಳೂರು ಆಕಾಶವಾಣಿಯಲ್ಲಿ ತನ್ನ ಪ್ರತಿಭೆಯ ಕಲಾ ಜರ್ನಿಯ ಬಗ್ಗೆ ಕಾರ್ಯಕ್ರಮವನ್ನು ನೀಡಿದ್ದಾರೆ.
ತುಳುನಾಡ ಪ್ರತಿಭೆ ಒಂದು ಚಲನ ಚಿತ್ರಕ್ಕೆ ಆಯ್ಕೆಯಾಗಿರುತ್ತಾರೆ. ಎಲ್ಲ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಹುಮುಖ ಪ್ರತಿಭೆ.