ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಾ.01 ರಂದು ವರ್ಷಂಪ್ರತಿಯಂತೆ ಮಹಾಶಿವರಾತ್ರಿಯ ಪ್ರಯುಕ್ತ ಮಹಾಮೃತ್ಯುಂಜಯ ಯಾಗ, ಶ್ರೀ ಬಸವೇಶ್ವರ ದೇವರಿಗೆ ಶತರುದ್ರಾಭಿಷೇಕ, ರಂಗಪೂಜೆ, ಮಹಾಪೂಜೆ ನಡೆಯಿತು.
ಬೆಳಿಗ್ಗೆ ದೀಪಾರಾಧನೆಯೊಂದಿಗೆ ಅಹೋರಾತ್ರಿ ಭಜನಾ ಸೇವೆ ಪ್ರಾರಂಭಗೊಂಡಿತು. ಬಳಿಕ ಶ್ರೀ ಬಸವೇಶ್ವರ ದೇವರಿಗೆ ಬೆಳಿಗ್ಗಿನ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಶ್ರೀ ದೇವಸ್ಥಾನದ ಸಾಲ ತೀರುಸುವರೆ ನಿಧಿಕುಂಭ ಸಮರ್ಪಣೆ ನಡೆದು ಮಹಾಮೃತ್ಯುಂಜಯ ಯಾಗ ಪ್ರಾರಂಭ, ಮದ್ಯಾಹ್ನ ಮೃತ್ಯುಂಜಯ ಹೋಮ ಪೂರ್ಣಾಹುತಿ ನಡೆದು ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಸಹಿತ ಮಹಾಪೂಜೆ ನಡೆದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಸಂಜೆ ಶತರುದ್ರಾಭಿಷೇಕ, ರಾತ್ರಿ ರಂಗಪೂಜೆ, ಮಹಾಪೂಜೆ ನಡೆಯಿತು. ನಂತರ ರಾತ್ರಿಯಿಂದ ಮೂರು ಹಂತಗಳಲ್ಲಿ ರುದ್ರಾಭಿಷೇಕ ಸಹಿತ ಶಿವಕಲ್ಪೋಕ್ತ ಪೂಜೆ ನೆರವೇರಿತು. ನಂತರ ಮಾ.02 ರಂದು ಬೆಳಿಗ್ಗೆ ಭಜನಾ ಮಂಗಳೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಅದ್ಯಕ್ಷರು, ಕಾರ್ಯಕರ್ತರು ಸೇರಿದಂತೆ ಭಕ್ತಾದಿಗಳು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ