Ad Widget

ಡಿ.16,17 ರಂದು ಬ್ಯಾಂಕ್ ನೌಕರರ ಮುಷ್ಕರ – ಕ್ಯಾಶ್ ಮುಗಿಯುವ ತನಕ ಇರಲಿದೆ ಎಟಿಎಂ ಸೇವೆ

ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಸರಕಾರದ ಯೋಜನೆ ಖಂಡಿಸಿ ಎಲ್ಲಾ ಬ್ಯಾಂಕ್ ನೌಕರರು ಡಿ.16 ಮತ್ತು 17 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಎಟಿಎಂ ಗಳಲ್ಲಿ ಕ್ಯಾಶ್ ಮುಗಿಯುವ ತನಕ ಇರಲಿದೆ ಎಂದು ತಿಳಿದುಬಂದಿದೆ. ಆದರೂ ಸಾರ್ವಜನಿಕರು ಮನೆಯಿಂದ ಹೊರಡುವಾಗಲೇ ತುರ್ತು ಅವಶ್ಯಕತೆಗೆ ಬೇಕಾದ ಹಣದ ಜತೆಗೆ ಹೊರಡುವುದು ಒಳಿತು.

ಸುಬ್ರಹ್ಮಣ್ಯ-ಐನೆಕಿದು ಸೊಸೈಟಿಗೆ ಜಿಲ್ಲಾ ಬ್ಯಾಂಕ್ ನಿಂದ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

ಡಿ.14 ರಂದು ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿ.ಸಿ.ಸಿ ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅದ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ಅದ್ಯಕ್ಷ ಜಯಪ್ರಕಾಶ್ ಕೂಜುಗೋಡು ಹಾಗೂ ಮುಖ್ಯ...
Ad Widget

ಸುಬ್ರಹ್ಮಣ್ಯ : ಶೌಚಾಲಯ ಉದ್ಘಾಟನೆ

ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಕುಮಾರಧಾರ ಸ್ನಾನ ಘಟ್ಟದ ಬಳಿಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಯಾತ್ರಾರ್ಥಿಗಳ ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ನಿರ್ಮಿಸಲಾಗಿದ್ದು, ಡಿ.14 ರಂದು ಮಠದ ಆಡಳಿತಾಧಿಕಾರಿ ಸುದರ್ಶನ್ ಜೋಯಿಸ್ ಹಾಗೂ ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ಈ ಶೌಚಾಲಯವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ...

ಮಡಿಕೇರಿ ಎಸ್ ಐ ಚಿನ್ನಪ್ಪ ನಾಯ್ಕ ಅಂಜೇರಿ ನಿಧನ

ಮಡಿಕೇರಿಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಅಂಜೇರಿ ನಿವಾಸಿ ಚಿನ್ನಪ್ಪ ನಾಯ್ಕರವರು ಡಿ.15 ರಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿನ್ನಪ್ಪ ನಾಯ್ಕರವರು ರಜೆಯ ಮೇಲೆ ಮನೆಯಲಿದ್ದು, ಡಿ.15 ರಂದು ಮುಂಜಾನೆ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ....

ಮಡಪ್ಪಾಡಿ ಸೊಸೈಟಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

ಮಂಗಳೂರಿನಲ್ಲಿ ಡಿ.14 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳ ವಾರ್ಷಿಕ ಮಹಾಸಭೆಯಲ್ಲಿ ಮಡಪ್ಪಾಡಿ ಕೃಷಿ ಪತ್ತಿನ ಸಹಕಾರ ಸಂಘವು 2020-21 ನೇ ಸಾಲಿನ ವ್ಯಾವಹಾರದಲ್ಲಿನ ಗಣನೀಯ ಸೇವೆಯನ್ನು ಗುರುತಿಸಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಗಳಿಸಿದೆ.ಹಾಗೂ ಸಹಕಾರಿ ಸಂಘ ಅಧ್ಯಕ್ಷರಾದ ಪಿ.ಸಿ.ಜಯರಾಮ್ ಇವರು ಸಂಘದ ಅಧ್ಯಕ್ಷರಾಗಿ ಸತತ 25ನೇ ಬಾರಿ...

ಡಿ.19: ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ಆದಿತ್ಯವಾರದಂದು ಪೂರ್ವಾಹ್ನ 10.30ಕ್ಕೆ ಸರಿಯಾಗಿ ನಾಯರ್ ವಾಣಿಜ್ಯ ಸಂಕೀರ್ಣದ ವಠಾರ ಗಾಂಧಿನಗರ, ಸುಳ್ಯದಲ್ಲಿ ಸಂಘದ ಅಧ್ಯಕ್ಷರಾದ ಐ.ಕೆ.ಮಹಮ್ಮದ್ ಇಕ್ಬಾಲ್ ಎಲಿಮಲೆ ರವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಸಕಾಲಕ್ಕೆ ಹಾಜರಾಗಿ ಸಭಾ ಕಲಾಪಗಳನ್ನು...

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ – ರೇಣುಕಾ ಪ್ರಸಾದ್ ಭರ್ಜರಿ ಗೆಲುವು

ರಾಜ್ಯ ಒಕ್ಕಲಿಗರ ಸಂಘದ ಮತ ಎಣಿಕೆ ಮುಗಿದಿದ್ದು ಡಾ. ರೇಣುಕಾಪ್ರಸಾದ್ಕೆ.ವಿ. 3295 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಸಮೀಪದಪ್ರತಿಸ್ಪರ್ಧಿ ಸಹೋದರ ಡಾ. ಕೆ.ವಿ. ಚಿದಾನಂದರು 1741 ಮತ ಪಡೆದು ಪರಾಭವಗೊಂಡರು. ಹೇಮಾನಂದ ಹಲ್ದಡ್ಕರಿಗೆ 346 ಮತ ದೊರೆತಿದೆ.

ಡಿ.18: ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ.ಪಿ.ಕೆ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಪೂರ್ವಾಹ್ನ ಗಂಟೆ 10.30ಕ್ಕೆ ಸರಿಯಾಗಿ ಸಂಘದ ಸಭಾಭವನ 'ಅಮರ ಸಹಕಾರ ಸೌಧ' ಕುಕ್ಕುಜಡ್ಕದಲ್ಲಿ ಜರುಗಲಿದೆ. ಈ ಸಭೆಗೆ ಸಂಘದ ಎಲ್ಲಾ ಸದಸ್ಯರು ಸಕಾಲಕ್ಕೆ ಹಾಜರಾಗುವಂತೆ ಸಂಘದ ಮುಖ್ಯ...

ಕೇರ್ಪಡ ಜಾತ್ರೋತ್ಸವದಲ್ಲಿ ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳದ ವತಿಯಿಂದ ಚೆಂಡೆ ಕಾರ್ಯಕ್ರಮ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು ಈ ಪ್ರಯುಕ್ತ ಇಂದು ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳದ ವತಿಯಿಂದ ಚೆಂಡೆ ಕಾರ್ಯಕ್ರಮ ನಡೆಯಿತು.

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಶ್ರೀದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ, ಬೆಡಿ ಪ್ರದರ್ಶನ

ಕೇರ್ಪಡದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ ವರ್ಷಾವಧಿ ಜಾತ್ರೋತ್ಸವವು ಡಿ.14 ರಂದು ಆರಂಭಗೊಂಡಿದೆ. ಜಾತ್ರೋತ್ಸವದ ಅಂಗವಾಗಿ ಡಿ.14 ಮಂಗಳವಾರದಂದು ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ| ಪುಣ್ಯಾಹವಾಚನ, ಮಹಾಗಣಪತಿ ಹೋಮ, ಚಂಡಿಕಾಯಾಗದ ಪ್ರಾರಂಭ, ಹಸಿರು ಹೊರೆಕಾಣಿಕೆ ಸಮರ್ಪಣೆ, ಬೆಳಿಗ್ಗೆ ತೋರಣ ಮುಹೂರ್ತ, ಪೂರ್ವಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ,...
Loading posts...

All posts loaded

No more posts

error: Content is protected !!