Ad Widget

ಪಂಬೆತ್ತಾಡಿ ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ

ಪಂಬೆತ್ತಾಡಿ ಗ್ರಾಮದ ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷ ರ ಮನೆಗೆ ನಾಮಫಲಕ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾದ ಹರೀಶ್ ಕಂಜಿಪಿಲಿ, ಬೆಳ್ಳಾರೆ ಶಕ್ತಿ ಕೇಂದ್ರದ ಅಧ್ಯಕ್ಷ ರಾದ ವಸಂತ ನಡುಬೆಟ್ಟು. ಬಿಜೆಪಿ ಮುಖಂಡರುಗಳಾದ ಭಾಗೀರಥಿ ಮುರುಳ್ಯ, ಶ್ರೀನಾಥ್ ಬಾಳಿಲ, ಸಂತೋಷ್ ಜಾಕೆ, ದಿಲೀಪ್ ಬಾಬ್ಲುಬೆಟ್ಟು, ಜಗದೀಶ ಮಠ, ಹರ್ಷಿತ್ ಗೋಳಿಕಟ್ಟೆ, ಬೂತ್ ಸಮಿತಿ...

ಕುಕ್ಕೆ ಸುಬ್ರಹ್ಮಣ್ಯ :- ಕುಮಾರ ಪರ್ವತ ಯಾತ್ರೆ

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಂಪ್ರದಾಯದ ಪ್ರಕಾರ ನಡೆದುಕೊಂಡು ಬಂದಿರುವ ಪರ್ವತದ ಕುಮಾರನ ಪಾದ ಪೂಜೆ ಡಿ.25 ರಂದು ನೆರವೇರಿತು.ದೇವಳದ ವತಿಯಿಂದ ಕುಮಾರ ಪರ್ವತಕ್ಕೆ ಯಾತ್ರೆ ಕೈಗೊಂಡು ಅಲ್ಲಿ ಪೂಜೆ ನೆರವೇರಿಸಲಾಯಿತು. ಕುಮಾರ ಪರ್ವತದ ತುದಿಯಲ್ಲಿರುವ ಕುಮಾರನ ಪಾದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ...
Ad Widget

ಸುಳ್ಯ : ದಿನೇಶ್ ಅಡ್ಕಾರ್ ಅವರಿಂದ ಚೆನ್ನಕೇಶವ ದೇವಸ್ಥಾನಕ್ಕೆ ವಾಟರ್ ಪ್ಯೂರಿಫಯರ್ ಕೊಡುಗೆ

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ಮಾಲಕರಾದ ದಿನೇಶ್ ಅಡ್ಕಾರ್ ಅವರು ಡಿ.25 ರಂದು ಸುಮಾರು 45,000 ರೂಪಾಯಿ ಮೊತ್ತದ ವಾಟರ್ ಕೂಲರ್ ಹಾಗೂ ವಾಟರ್ ಫ್ಯೂರಿಪಯರ್ ಅನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ದೇವಳದ ಅನುವಂಶಿಕ ಮೊಕ್ತೇಸರ ಡಾ| ಹರ ಪ್ರಸಾದ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ|...

ಕುಕ್ಕೆ ಸುಬ್ರಹ್ಮಣ್ಯ :- ರಕ್ತೇಶ್ವರಿ ದೈವ ಸನ್ನಿಧಿಗೆ ಬೆಳ್ಳಿಯ ಮೊಗ ಸಮರ್ಪಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ರಕ್ತೇಶ್ವರಿ ದೈವ ಸನ್ನಿಧಿಗೆ ಡಿ.23 ರಂದು ಸುಬ್ರಹ್ಮಣ್ಯದ ಆಶ್ರಯ ವಸತಿಗೃಹದ ಮಾಲಕರುಗಳಾದ ನಾಗೇಶ್.ವಿ ನಾಯಕ್ ಹಾಗೂ ರವಿ.ವಿ ನಾಯಕ್ ಅವರು ಸುಮಾರು 2 ಲಕ್ಷದ 20 ಸಾವಿರ ರೂಪಾಯಿ ವೆಚ್ಚದ 2 ಕೆ.ಜಿ 285 ಗ್ರಾಂ ತೂಕದ ಬೆಳ್ಳಿಯ ಮೊಗ(ಮುಖವಾಡ) ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ...

ಪತ್ರಕರ್ತ ಬಾಲಕೃಷ್ಣ ಭೀಮಗುಳಿಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿಯ ಪ್ರಶಸ್ತಿಗೆ ಹರಿಹರ ಪಲ್ಲತ್ತಡ್ಕದವರಾಗಿದ್ದು, ಕಾರ್ಕಳ ತಾಲೂಕಿನ ಉದಯವಾಣಿ ಪತ್ರಿಕೆ ವರದಿಗಾರರಾಗಿರುವ ಬಾಲಕೃಷ್ಣ ಭೀಮಗುಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅರಣ್ಯ ಕುರಿತ ಅತ್ಯುತ್ತಮ ವರದಿಗೆ ಕೊಡಲ್ಪಡುವ ಪ್ರತಿಷ್ಠಿತ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಗೆ ಇವರು ಆಯ್ಕೆಯಾಗಿದ್ದಾರೆ. ಸುಬ್ರಹ್ಮಣ್ಯ...

ಅಯ್ಯನಕಟ್ಟೆ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೋತ್ಸವವು ಜ.26ರಿಂದ ಜ.29ರ ತನಕ ಜರುಗಲಿದ್ದು, ಇಂದು(ಡಿ.25) ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಸಂಚಾಲಕರಾದ ಸಂಧ್ಯಾ.ಬಿ.ಎನ್ ರಾವ್ ರವರು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ,...

ಬಾಳಿಲ ಮುಪ್ಪೇರ್ಯ: ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ಭಜನಾ ತರಬೇತಿ ಸಮಾರೋಪ ಕಾರ್ಯಕ್ರಮ

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಭಜನೆ ತರಬೇತಿಯ ಸಮಾರೋಪ ಸಮಾರಂಭ ಡಿ.25 ರಂದು ವಿದ್ಯಾಬೋಧಿನೀ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿತು. ರಾಧಾಕೃಷ್ಣ ರಾವ್ ಉಡುವೆಕೋಡಿ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀನಿವಾಸ ಜೋಗಿಬೆಟ್ಟು ಮತ್ತು ವೆಂಕಟ್ರಮಣ ಆಚಾರ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಭಜನೆ ಹೇಳಿಕೊಟ್ಟರು. ಬಾಳಿಲ ಗ್ರಾಮ ಪಂಚಾಯತ್...

ಪ್ರಸನ್ನ ಕ್ಲಿನಿಕ್ ನ ಡಾ.ಗೌರಿಶಂಕರ್ ಮಾಲಿಕತ್ವದ ಪ್ರಸನ್ನ ಮೆಡಿಕಲ್ಸ್ ಶುಭಾರಂಭ

ಐವರ್ನಾಡು ಪ್ರಸನ್ನ ಕ್ಲಿನಿಕ್ ನ ಡಾ.ಗೌರಿಶಂಕರ್ ಸಿ.ಕೆ ಮತ್ತು ಶ್ರೀಮತಿ  ಶ್ರೇಯಸ್ವಿ .ವಿ ಯವರ ಮಾಲಿಕತ್ವದ ಪ್ರಸನ್ನ ಮೆಡಿಕಲ್ಸ್ ಡಿ.25 ರಂದು ಐವರ್ನಾಡು ಮುಖ್ಯ ರಸ್ತೆ  ನೆಕ್ರಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ನಿವೃತ್ತ ಪ್ರಾಂಶುಪಾಲರಾದ ವಿಘ್ನೇಶ್ವರ ವರ್ಮುಡಿ ಉದ್ಘಾಟಿಸಿ ಶುಭಹಾರೈಸಿದರು. ಬೆಳಿಗ್ಗೆ ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಎಸ್.ವಿ.ಎಂ ಮೆಡಿಕಲ್ಸ್...

ಐವರ್ನಾಡು: ಪಾಲೆಪ್ಪಾಡಿ- ಅಮಲ ರಸ್ತೆ ದುರಸ್ತಿಗೆ ಆಗ್ರಹಿಸಿ ಜ.3ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಐವರ್ನಾಡು, ಪಾಂಬಾರು, ಅಮಲ, ರಸ್ತೆಯ ದುರಸ್ತಿಯಾಗಿರದೇ ಇರುವುದನ್ನು ವಿರೋಧಿಸಿ ಜ.3 ರಂದು ಐವರ್ನಾಡು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಡಿ. 25 ರಂದು ಪಾಲೆಪ್ಪಾಡಿ ಮಂಜುಶ್ರೀ ಕ್ರೀಡಾಂಗಣದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಹಾಗೂ ಉಪಾಧ್ಯಕ್ಷರನ್ನಾಗಿ ಅಶೋಕ್ ಎಡಮಲೆ ಅವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ...

ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜನ ನೇಮೋತ್ಸವ

ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.24 ಶುಕ್ರವಾರದಂದು ನಡೆಯಿತು. ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಕೊರಗಜ್ಜ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ವರ್ಷಾವಧಿಯ ಶ್ರೀ ಕೊರಗಜ್ಜ ದೈವದ ನೇಮೋತ್ಸವ ಜರುಗಿತು. ಈ ಸಂದರ್ಭದಲ್ಲಿ ಶ್ರೀಮತಿ ಮತ್ತು...
Loading posts...

All posts loaded

No more posts

error: Content is protected !!