- Tuesday
- April 29th, 2025

ಸಮಾನ ಮನಸ್ಕ ಯುವಕರು ಸೇರಿ ಕಟ್ಟಿದ ಹೊಂಬೆಳಕು ತಂಡದ ಸದಸ್ಯರು ತಿಂಗಳಿಗೆ ಒಂದು ದಿನ ಒಂದು ಗಂಟೆಗಳ ಕಾಲ ಸ್ವಚ್ಛತಾ ಕಾರ್ಯವನ್ನು ಮಾಡುವ ಉದ್ದೇಶವನ್ನು ಹೊಂದಿದ್ದು ಅದರಂತೆ ಡಿ.12 ರಂದು ತಮ್ಮ 2ನೇ ತಿಂಗಳ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಕಂದ್ರಪ್ಪಾಡಿ ಕ್ರಾಸ್ ನಿಂದ ಗುತ್ತಿಗಾರು ಕಾಲೇಜು ದ್ವಾರದ ಹತ್ತಿರದ ಬಸ್ ತಂಗುದಾಣದವರೆಗೆ ಸ್ವಚ್ಛತಾ ಕಾರ್ಯ ನಡೆಯಿತು....

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರಿಯ ಇದರ 5ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುತ್ತಿರುವ ಭಜನಾ ತರಬೇತಿಯ ಎರಡನೇ ದಿನವಾದ ಇಂದು(ಡಿ.12) ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆಮುಂಡುಗಾರು ಇದರ ಸದಸ್ಯರಾದ ನಾರಾಯಣ ಕಳಂಜ ಮತ್ತು ಗಿರಿಧರ ಕಳಂಜ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಭಜನೆ ತರಬೇತಿಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ನಡೆಯಿತು. ಸಂಪನ್ಮೂಲ...

ಮಂಜೇಶ್ವರದ ಶೇಣಿ ತೋಟದ ಮನೆ ರವೀಂದ್ರನಾಥ ನಾಯಕ್ - ಸಂದ್ಯಾ ಅವರ ಸುಪುತ್ರ ಅಭಿಜಿತ್ ಅವರ ವಿವಾಹವು ಸುಳ್ಯದ ಉದ್ಯಮಿ ಗೋಪಾಲಕೃಷ್ಣ ಕರೋಡಿ ಕವಿತಾ ಕರೋಡಿ ಅವರ ಸುಪುತ್ರಿ ಸುಮನ ಅವರೊಂದಿಗೆ ಡಿ. ೧೨ ರಂದು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮಶ್ರೀ ಕೆ.ಯು ದಾಮೋದರ ತಂತ್ರಿಗಳವರ (ನೀಲೇಶ್ವರ) ನೇತೃತ್ವದಲ್ಲಿ ಡಿ.08 ಬುಧವಾರದಂದು ಷಷ್ಠಿ ಮಹೋತ್ಸವ ಆರಂಭಗೊಂಡಿದ್ದು ಡಿ.12 ಆದಿತ್ಯವಾರದ ತನಕ ವೈಭವೋಪೇತವಾಗಿ ಜರುಗಿತು. ಡಿ.08ರಂದು ಪಂಚಮಿ ಪ್ರಯುಕ್ತ ವಾಸ್ತು ರಕ್ಷೋಘ್ನಾದಿ ಶುದ್ಧಿ ಕಾರ್ಯ, ಆಸ್ತಿಕ ಬಂಧುಗಳು, ಸಂಘ ಸಂಸ್ಥೆಗಳು ಹಾಗೂ ಕಾಂಚೋಡು ಶ್ರೀ ಮಂಜುನಾಥೇಶ್ವರ...

ಪೆರುವಾಜೆ ಗ್ರಾಮದ ಮಠತ್ತಡ್ಕ ಚಂದ್ರಶೇಖರ ನಾಯ್ಕರ ಸುಪುತ್ರ ರಮೇಶ.ಎಂ ರವರ ವಿವಾಹವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಂಜಲ್ತಡ್ಕ ಸುಂದರ ನಾಯ್ಕರ ಸುಪುತ್ರಿ ಹರ್ಷಿತಾರೊಂದಿಗೆ ಡಿ.12 ಆದಿತ್ಯವಾರದಂದು ಪೆರುವಾಜೆಯ ಜೆ.ಡಿ.ಆಡಿಟೋರಿಯಂನಲ್ಲಿ ನಡೆಯಿತು.

ಸುಳ್ಯ: ಶ್ರಿ ಚೆನ್ನಕೇಶವ ದೇವಸ್ಥಾನದ ನೂತನ ಬ್ರಹ್ಮ ಕಲಶೋತ್ಸವವು ಡಿ.21 ರಿಂದ ನಡೆಯಲಿದ್ದು ಆ ಪ್ರಯುಕ್ತ ಡಿ. 11 ರಂದು ದೇವಸ್ಥಾನದ ಸ್ವಚ್ಚತಾ ಕಾರ್ಯ ನಡೆಯಿತು. ಈ ಸಂದರ್ಭ ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಯಂ ವೆಂಕಪ್ಪ ಗೌಡ ,ರಾಧಾಕೃಷ್ಣ ರೈ ಬೂಡು , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ,ಭಗವತಿ ಯುವ ಸೇವಾ ಸಂಘ ಬೂಡು...

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸ್ಯಾಂಡಲ್ ವುಡ್ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.ನಂತರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ಹಾಗೂ ನಾಗಪ್ರತಿಷ್ಠೆ ನೆರವೇರಿಸಿದರು. ಬಳಿಕ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಭೇಟಿ ಮಾಡಿ ಆಶೀರ್ವಾದ...

ಡಿ.10 ರಂದು ನಡೆದ ವಿಧಾನ ಪರಿಷತ್ ಚುನಾವಣೆ ಬಳಿಕ ಸುಳ್ಯ ನಗರ ಪಂಚಾಯತ್ ಕಾರ್ಯಾಲಯದ ಮುಂದೆ ಕಾಂಗ್ರೆಸ್ 4 ಸದಸ್ಯರು ಮತ್ತು ಪಕ್ಷೇತರ 2 ಸದಸ್ಯರು ಮತ್ತು ಉಸ್ತುವಾರಿ ಸದಸ್ಯರೊಂದಿಗೆ ವಿಜಯದ ಸಂಕೇತವನ್ನು ತೋರಿಸಿ ಫೋಟೋ ಪೋಸ್ ಕೊಟ್ಟು ಮಾಧ್ಯಮದಲ್ಲಿ ಸಾರ್ವಜನಿಕರಿಗೆ ತಿಳಿಸಿರುವುದನ್ನು ನಾನು ಖಂಡಿಸುತ್ತೇನೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ,...

ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.24 ಶುಕ್ರವಾರದಂದು ನಡೆಯಲಿದೆ. ಬೆಳಿಗ್ಗೆ ಗಂಟೆ 8.00ಕ್ಕೆ ಗಣಹೋಮ, ಬೆಳಿಗ್ಗೆ ಗಂಟೆ 9.00ಕ್ಕೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7.00ಕ್ಕೆ ದೈವದ ಭಂಡಾರ ತೆಗೆದು ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ...

ನಡುಗಲ್ಲು ಸಮೀಪದ ಅಂಜೇರಿಯ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ರಸ್ತೆ ದಾಟಿದ ಘಟನೆ ಡಿ.10 ರ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ.ಸುಬ್ರಹ್ಮಣ್ಯ ಗುತ್ತಿಗಾರು ಮುಖ್ಯ ರಸ್ತೆಯ ನಡುಗಲ್ಲು ಸಮೀಪದ ಅಂಜೇರಿ ಬಸ್ ತಂಗುದಾಣದ ಬಳಿ ಕಾಡಾನೆಯೊಂದು ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳಭಾಗದ ತೋಟಕ್ಕೆ ತೆರಳಿದೆ.ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ...

All posts loaded
No more posts