
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಿಟ್ ವಿತರಣೆ ” ವಾತ್ಸಲ್ಯ ಕಾರ್ಯಕ್ರಮ”
ನಡೆಯಿತು. ಈ ವಾತ್ಸಲ್ಯ ಕಾರ್ಯಕ್ರಮವು ಹೇಮಾವತಿ ಹೆಗ್ಗಡೆ ಯವರ
ಆಶಯದಂತೆ ಕಡು ಬಡವ ಪಲಾನುಭವಿಗಳಿಗೆ ಜೀವನಾಶ್ಯಕತೆಗೆ ಬೇಕಾದ ಸಾಮಾಗ್ರಿಗಳನ್ನು ಹಾಗೂ
ಕುಟುಂಬದಲ್ಲಿ ದುಡಿಯಲು ಅಶಕ್ತರಾದವರಿಗೆ ಮನೆಗೆ ಬೇಕಾದ ಸವಲತ್ತುಗಳು, ಮಾಶಸಾನ, ಅನಾರೋಗ್ಯಸ್ಥರಿಗೆ
ಔಷಧಿ ಮತ್ತು ಮನೆಯ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳುವುದು ಹಾಗೂ ಆಶಕ್ತ ಮತ್ತು ನಿರ್ಗತಿಕರಿಗೆ ಸಹಕಾರ
ನೀಡುವುದು ಉದ್ದೇಶವಾಗಿರುತ್ತದೆ.
ಈ ಕಾಲದ ನಾಗರಿಕ ಸಮಾಜದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರಿಗೆ ಸಂಸ್ಥೆ ನೆರವು ನೀಡಿ ಆತ್ಮಸ್ಥೆರ್ಯ ತುಂಬುತ್ತಿದೆ. ಸುಳ್ಯ ತಾಲೂಕಿನಲ್ಲಿ
2021-22ನೇ ಸಾಲಿನಲ್ಲಿ 32 ಕುಟುಂಬಗಳಿಗೆ ಜೀವನಾಶ್ಯಕತೆಗೆ ಬೇಕಾದ ವಸ್ತುಗಳನ್ನು ಪೂರೈಸಲಾಗಿದೆ. ಡಿ.30 ರಂದು ಸುಳ್ಯ ತಾಲೂಕಿನ ಪಂಜ ವಲಯದ ಲಿಂಗ ಮತ್ತು ಅವಿನ್ ಕುಮಾರ್ ರವರಿಗೆ ತಾಲೂಕಿನ ಯೋಜನಾಧಿಕಾರಿ ಚೆನ್ನಕೇಶವ ರವರು ಕಿಟ್‌ಗಳನ್ನು ಸಾಂಕೇತಿಕ ವಿತರಣೆ ಮಾಡಿದರು. ಈ ಸಂದರ್ಭ ಪಂಜ ವಲಯದ ಮೇಲ್ವಿಚಾರಕಿ ಶ್ರೀಮತಿ ಉಷಾಕಲ್ಯಾಣಿ, ಒಕ್ಕೂಟದ ಅಧ್ಯಕ್ಷ ಧರ್ಮಪಾಲ, ಸೇವಾಪ್ರತಿನಿಧಿಗಳು
ಉಪಸ್ಥಿತರಿದ್ದರು.