
ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ ಸುಳ್ಯ ವಿದ್ಯುತ್ ವಿತರಣಾ
ಕೇಂದ್ರದಿಂದ ಹೊರಡುವ 11 ಕೆ.ವಿ.ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ಕೆಲಸ
ಹಮ್ಮಿಕೊಂಡಿರುವ ಕಾರಣ ಡಿ.31 ರಂದು ಸುಳ್ಯ-1, ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ,ಅರಂತೋಡು
ಕೋಲ್ಚಾರು, ಕಾವು, ಅಜ್ಜಾವರ, ಕೇನ್ಯ, ಸುಬ್ರಹ್ಮಣ್ಯ ಫೀಡರ್ ಗಳಲ್ಲಿ ಬೆಳಗ್ಗೆ 10 ರಿಂದ
ಸಂಜೆ 6 ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.