

ಬೆಳ್ಳಾರೆಯ ಹೆಸರಾಂತ ನಾಟಿ ವೈದ್ಯರಾಗಿರುವ ಅಶೋಕ್ ಕೊಡಚಾದ್ರಿಯವರಿಂದ ತಯಾರಿಸಲ್ಪಡುವ “ಪಡುಮಲೆ ದೇಯಿ ಬೈದೈತಿ” ಸಂಜೀವಿನಿ ನೋವಿನ ತೈಲ ಹಾಗೂ ಇತರ ಆಯುರ್ವೇದಿಕ್ ಉತ್ಪನಗಳ ವಿಶೇಷ ಪ್ರಚಾರ ಮತ್ತು ಮಾರಾಟವು ಮೂಡಬಿದಿರೆಯ ಜೋಡುಕರೆ ಕಂಬಳದಲ್ಲಿ ಯಶಸ್ವಿಯಾಗಿ ನಡೆಯಿತು. ಪಡುಮಲೆಯಲ್ಲಿ ಸುವರ್ಣ ಕೇದಗೆ ಯಾನೆ ದೇಯಿ ಬೈದಿತಿ ಹುಟ್ಟಿ ಬೆಳೆದ ಕೂವೆ ತೋಟದ ಮನೆಯ ಸ್ತಬ್ದ ಚಿತ್ರಣವು ನೋಡುಗರ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಜನ್ಮಸ್ಥಾನ ಮತ್ತು ಮೂಲಸ್ಥಾನ ಸಂಚಾಲನ ಟ್ರಸ್ಟ್ ಅಧ್ಯಕ್ಷರು ಆಗಿರುವ ಹರಿಕೃಷ್ಣ ಬಂಟ್ವಾಳ್ ಹಾಗೂ ಶ್ರೀಮಂತ ರಾಜ ಗುಳಿಗ ಕ್ಷೇತ್ರ ಮೂಡುಮನೆ ಬಂದಲೆ ಪಚ್ಚನಾಡಿಯ ಧರ್ಮಧರ್ಶಿ ಏರೆಗಾವುಯೆ ಕಿರಿಕಿರಿ ಖ್ಯಾತಿಯ ಸತೀಶ್ ಬಂದಲೆಯವರು ಉಪಸ್ಥಿತರಿದ್ದು “ದೇಯಿ ಬೈದ್ಯೆತಿ” ಉತ್ಪನ್ನಗಳ ಗುಣಮಟ್ಟ, ವಿಶೇಷತೆ ಹಾಗೂ ಪರಿಣಾಮಕಾರಿ ಎಂದು ತಿಳಿಸಿ ಜನರನ್ನು ಪ್ರೇರೆಪಿಸಿದರು. ಈಗಾಗಲೇ ಉತ್ತಮ ಪರಿಣಾಮಕಾರಿ
ಔಷಧಿಯಾಗಿರುವ ದೇಯಿ ಬೈದ್ಯತಿ ಉತ್ಪನ್ನಗಳ ಬಗ್ಗೆ ಈ ಸಂದರ್ಭದಲ್ಲಿ ಕಿರಣ್ ಸಾಲಲ್ಯಾನ್ ಮೂಡಬಿದ್ರಿ, ಹರಿಶ್ಚಂದ್ರ ನಾರಾವಿ ಹಾಗೂ ಜಗದೀಶ್ ಪೂಜಾರಿ ಶಿರ್ವ ಅವರು ಮತ್ತಷ್ಟು ಪ್ರಚಾರ ನೀಡಿದರು.