
ಒಂದು ಮರದ ಕೊಂಬೆಗೆ ಏನಾದರೂ ಆಯಿತೆಂದು ಆ ಕೊಂಬೆಯನ್ನೇ ಕಡಿಯುವುದರಲ್ಲಿ ಏನು ಅರ್ಥ, ಅದರನ್ನು ಸರಿ ಪಡಿಸುವ ಮಾರ್ಗವಿದ್ದಲ್ಲಿ ಹಾಗೆಯೇ ಆರೋಗ್ಯ ಎನ್ನುವುದು. ದೇಹದ ಒಂದು ಭಾಗಕ್ಕೆ ಏನಾದರೂ ಆಯಿತೆಂದರೆ ಆ ಭಾಗವನ್ನೇ ಕತ್ತರಿಸುವುದರಲ್ಲೇನಿದೆ ಅರ್ಥ.
ರೋಗದ ಪ್ರತಿ ಲಕ್ಷಣವನ್ನು ನೋಡಿ ಅದರೊಡನೆ ಆ ವ್ಯಕ್ತಿಯಲ್ಲಿ ಆದ ಬದಲಾವಣೆಗಳನ್ನು ಗಮನಿಸಿ ಅದಕ್ಕೆ ಸೂಕ್ತವಾದ ಮದ್ದನ್ನು ಕೊಡುವುದರಿಂದ ಆ ಮನುಷ್ಯನಲ್ಲಿ ಆ ರೋಗದಿಂದಾದ ಬದಲಾವಣೆಯನ್ನು ಸರಿ ಪಡಿಸುವಲ್ಲಿ ಯಶಸ್ವಿಯಾದ ಆರೋಗ್ಯ ಪದ್ದತಿಯಲ್ಲಿ ಹೋಮಿಯೋಪತಿಯು ಒಂದು .
ಶೀಘ್ರಗುಣ ಹೊಂದುವ ಹಾಗು ದೀರ್ಘಕಾಲಿಕ ಎರಡು ತೆರನಾದ ರೋಗಗಳಲ್ಲಿ ಹೋಮಿಯೋಪತಿಯ ಚಿಕಿತ್ಸೆಯ ಅತ್ಯಂತ ಪರಿಣಾಮಕಾರಿಯಾಗಿದೆ. ಬೆಳೆಯುತ್ತಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣುವ ರೋಗಗಳಾದ ವಾಂತಿ , ಭೇದಿ , ಜ್ವರ , ನಿಮೋನಿಯ , ಅಲರ್ಜಿ ,ದಡಾರ , ಮಕ್ಕಳಲ್ಲಿ ಕಿರಿಕಿರಿ , ರಜ್ಜೆ ಕಡಿಯುವುದು , ನಿದ್ರಾಹೀನತೆ , ಅತಿಯಾಗಿ ಉದ್ವೇಗಕ್ಕೊಳಕಾಗುವುದು ಇತ್ಯಾದಿ ರೋಗಗಳಲ್ಲಿ ಪರಿಣಾಮಕಾರಿ .
ಸಾಂಕ್ರಾಮಿಕ ರೋಗಗಳು , ಸ್ತ್ರೀ ರೋಗ , ಬಂಜೆತನ , ಮುಟ್ಟಿನ ತೊಂದರೆ (ಋತುಚಕ್ರದ ತೊಂದರೆ ) , ಗರ್ಭಕೋಶದ ಗಡ್ಡೆಗಳು , ಅಂಡಾಶಯದ ಸಮಸ್ಯೆ .
ಮಧುಮೇಹ , ಬಿಪಿ , ಹೊಟ್ಟೆಯುಬ್ಬರ , ಗ್ಯಾಸ್ಟ್ರಿಕ್ , ಗಂಟುಗಳ ಸವೆತ , ಮೂಳೆ ಯೂತ ,ದೀರ್ಘ ಕಾಲಿಕ ತೆಲೆನೋವು , ಅಸ್ತಮಾ , ಬೊಜ್ಜುತನ ಉತ್ಯಾದಿ ರೋಗಗಳಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ. ಕೊರೊನಾದ ಸಮಯದಲ್ಲಿ ಅತ್ಯಂತ ಹೆಚ್ಚಿನ ಪರಿಣಾಮವನ್ನು ಎಲ್ಲೋರು ಗಳಿಸಿಕೊಂಡಿರುತ್ತಾರೆ.
ಇಷ್ಟೆಲ್ಲ ಕಾಯಿಲೆಗಳಿಗೆ ಪರಿಣಾಮ ಪಡೆಯುತ್ತಿದ್ದರು ಕೆಲವೊಂದು ಪ್ರಶ್ನೆಗಳಿಗೆ ಇನ್ನು ಕೇಳಿ ಬರುತ್ತಲೇ ಇದೆ .
ಪ್ರಶ್ನೆ – 01
ಹೋಮಿಯೋಪತಿ ಮದ್ದು ತೆಗೆದುಕೊಳ್ಳುವಾಗ ಬೇರೆ ಮದ್ದು ತೆಗೆದುಕೊಳ್ಳಬಹುದೇ ??
ಖಂಡಿತವಾಗಿ ತೆಗೆದುಕೊಳ್ಳಬಹುದು,ಹೋಮಿಯೋಪತಿ ಮದ್ದಿನೋಡನೆ ಬೇರೆ ವೈದ್ಯ ಪದ್ದತಿಯ ಮದ್ದು ತೆಗೆದುಕೊಳ್ಳುವ ವಿಧಾನವನ್ನು ವೈದ್ಯರ ಮಾರ್ಗಸೂಚಿಯೊಂದಿಗೆ ಪಡೆದುಕೊಳ್ಳಿ.
ಹೋಮಿಯೋಪತಿಯು ಕೆಲವು ಗಿಡ ಮೂಲಿಕೆ , ಬೇರು , ಸಸ್ಯ , ಪ್ರಾಣಿ , ಕೀಟ ಇತ್ಯಾದಿಗಳಿಂದ ಮಾಡಲ್ಪಟ್ಟಿದೆ, ಈ ಔಷದಿ ಬೇರೆ ಔಷದಿಯೊಡನೆ ಬೆರೆಯುವುದಿಲ್ಲ. ಇದರಿಂದಾಗಿ ನೀವು ಔಷದಿ ಸೇವನೆ ಮಾಡುತ್ತಿದ್ದರು ಇದನ್ನು ಸೇವನೆ ಮಾಡುವುದರಲ್ಲಿ ಯಾವುದೇ ಅಡ್ಡಿಯಿಲ್ಲ.
ಪ್ರಶ್ನೆ – 02
ಹೋಮಿಯೋಪತಿ ನಿಧಾನ ಅಲ್ವಾ ???
ಖಾಯಿಲೆಯ ಮೇಲೆ ಹೊಂದಿಕೊಳ್ಳುತ್ತದೆ. ಕೆಲವು ತೀವ್ರ ರೋಗ (Acute Disease ) ಅಂತಹ ರೋಗಗಳು ಅತೀ ವೇಗವಾಗಿ ಕಡಿಮೆಯಾಗುತ್ತದೆ ಬೇರೆ ವೈದ್ಯ ಪದ್ಧತಿಗಳಂತೆಯೇ. Chronic disease ಗಳು ಅಂದರೆ ಅಸ್ತಮಾ ಗ್ಯಾಸ್ಟ್ರಿಕ್ ಮತ್ತಿತರ ಖಾಯಿಲೆಗಳು ಕೊಂಚ ಸಮಯ ತೆಗೆದುಕೊಳ್ಳುತ್ತದೆ.ಕಡಿಮೆಯಾಗುವುದು ಖಾಯಿಲೆಗಳ ಮೇಲೆ ಹೊಂದಿಕೊಂಡಿರುತ್ತದೆ ಮತ್ತು ಕಡಿಮೆಯಾಗುವಾಗ ಕಾಯಿಲೆಗಳು ಮೂಲದಿಂದ ತೆಗಯುವುದರಲ್ಲಿ ಯಶಸ್ವಿಯಾಗುತ್ತದೆ.
ಹಾಗೆಂದ ಮಾತ್ರಕ್ಕೆ ನಿಧಾನವೆಂದೇನಲ್ಲ.
ಪ್ರಶ್ನೆ -03
ಪ್ರಾಣಿಗಳಿಗೆ ಹೋಮಿಯೋಪತಿ ಮದ್ದು ಕೊಡಬಹುದೇ ? ಮತ್ತು ಪರಿಣಾಮಕಾರಿಯಾಗಿದೆಯೇ ???
ಪ್ರಾಣಿಗಳಿಗೆ ಅತ್ಯಂತ ಉತ್ತಮ .ಹೆಚ್ಚಿನ ಸಮಸ್ಯೆಗಳಾದಂತಹ ಕೆಚ್ಚಲುಬಾವು (Mastitis) ಕರು ಹಾಕಿದಮೇಲೆ ಕಸ ಹೊರತೆಗೆಯಲು , ಸುಲಭ ಕರುವಿನ ಜನನಕ್ಕೆ , ದನದಲ್ಲಾಗುವ ಕಫಕ್ಕೆ.ಸಾಂಕ್ರಾಮಿಕ ರೋಗಗಳಿಗೆ ಮತ್ತಿತರ ಕಾಯಿಲೆಗಳಿಗೆ ಹೆಚ್ಚಿನ ಪರಿಣಾಮಕಾರಿಯಾಗಿದೆ.
ಹಾಗೆಯೇ ಕುರಿ, ಆಡು , ಕೋಳಿ ಮತ್ತಿತರ ಪ್ರಾಣಿಗಳಿಗೂ ಉಪಯುಕ್ತವಾಗಿದೆ.
ಪ್ರಶ್ನೆ – 04
ಹೋಮಿಯೋಪತಿ ಮದ್ದು ತೆಗೆದು ಕೊಂಡರೆ ಅಡ್ಡ ಪರಿಣಾಮ ಇದೆಯಾ ???
ಯಾವುದೇ ತರಹವಾದ ಅಡ್ಡ ಪರಿಣಾಮವಿಲ್ಲ ,ಆದರೆ ಮದ್ದನ್ನು ಸ್ವೀಕರಿಸುವಾಗ ವೈದ್ಯರಲ್ಲಿ ಅವರ ಮಾರ್ಗ ದರ್ಶನದಂತೆ ತೆಗೆದುಕೊಂಡರೆ ಉತ್ತಮ.

ಮಾಹಿತಿ : ಡಾ. ಆದಿತ್ಯ ಚನಿಲ
ಶ್ರೀ ಹೊಮಿಯೋ ಕೇರ್ ಕ್ಲಿನಿಕ್
ಸುಬ್ರಹ್ಮಣ್ಯ
ಮೊ : 8073052529