
ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಮತ್ತು ರಥೋತ್ಸವ ಅಂಗವಾಗಿ ಈ ದಿನ ಹಸಿರುವಾಣಿ ಸಂಗ್ರಹ ಮತ್ತು ಉಗ್ರಾಣ ಮುಹೂರ್ತ ನಡೆಯಿತು. ಉಗ್ರಾಣ ಮುಹೂರ್ತವನ್ನು ಶ್ರೀಮತಿ ಮಮತ ಸುದರ್ಶನ ಶೆಟ್ಟಿ,ಶಾರದಾ ಗಾರ್ಡನ್ ಕೇನ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ,ಕೋಶಾಧಿಕಾರಿ ಮುರಳಿ ಕಾಮತ್,ಗೌರವಾಧ್ಯಕ್ಷರಾದ ಭಾಸ್ಕರ ಗೌಡ ಪಂಡಿ,ಪ್ರಧಾನ ಆರ್ಚಕರಾದ ಯಂ.ವಿ. ಶ್ರೀವತ್ಸ ಮತ್ತು ಎಲ್ಲಾ ಬೈಲುವಾರಿನ ಸಂಚಾಲಕರು,ಸದಸ್ಯರು ಉಪಸ್ಥಿತರಿದ್ದರು. ಡಿ. 27ರಿಂದ ಜಾತ್ರೊತ್ಸವ ಪ್ರಾರಂಭಗೊಂಡು,ಡಿ.30 ರಾತ್ರಿ ಬ್ರಹ್ಮರಥೊತ್ಸವ ನಂತರ ಬಳ್ಪ ಬೆಡಿ (ಸಿಡಿ ಮದ್ದು ಪ್ರದರ್ಶನ) ನಡೆಯಲಿದೆ. ಡಿ. 31ರಂದು ದೇವರ ಅವಭೃತೋತ್ಸವ ನಡೆಯಲಿದೆ.