Ad Widget

ಅಯ್ಯನಕಟ್ಟೆ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆ ಜಾತ್ರೋತ್ಸವವು ಜ.26ರಿಂದ ಜ.29ರ ತನಕ ಜರುಗಲಿದ್ದು, ಇಂದು(ಡಿ.25) ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಸಂಚಾಲಕರಾದ ಸಂಧ್ಯಾ.ಬಿ.ಎನ್ ರಾವ್ ರವರು ಬಿಡುಗಡೆ ಮಾಡಿದರು.

. . . . . . . . .

ವೇದಿಕೆಯಲ್ಲಿ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ(ರಿ.) ಮೂರುಕಲ್ಲಡ್ಕ ಇದರ ಗೌರವಾಧ್ಯಕ್ಷರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು, ಅಧ್ಯಕ್ಷರಾದ ಲಕ್ಷ್ಮಣ ಗೌಡ ಬೇರಿಕೆ, ಕೋಶಾಧಿಕಾರಿ ಗಣೇಶ್ ಮುದ್ದಾಜೆ, ವಿಶ್ವಸ್ಥ ಲಿಂಗಪ್ಪ ಗೌಡ ತಂಟೆಪ್ಪಾಡಿ, ಅಯ್ಯನಕಟ್ಟೆ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಮಾಧವ ಗೌಡ ಅಯ್ಯನಕಟ್ಟೆ ಉಪಸ್ಥಿತರಿದ್ದರು.

. . . . . . .

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಮಿತಿಯ ಆಡಳಿತ ಮಂಡಳಿ ವಿಶ್ವಸ್ತರಾದ ಕಳಂಜ ಜಗನ್ನಾಥ ರೈಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಳಂಜ, ಬಾಳಿಲ, ಮುಪ್ಪೇರ್ಯ ಗ್ರಾಮಗಳ ಪ್ರತಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ತಂಡಗಳನ್ನು ರಚಿಸಲಾಯಿತು.

ಸಮಿತಿಯ ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜಾತ್ರೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ದೊಳ್ತೋಡಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading