
ಕೆದಂಬಾಡಿ ಸನ್ಯಾಸಿ ಗುಡ್ಡೆ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶದಲ್ಲಿ ಇಂದು ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಭಜನಾ ಸೇವೆ ನಡೆಸಲಾಯಿತು. ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಹರಿಣಾಕ್ಷಿ ಮತ್ತು ತರಬೇತುದಾರರಾದ ಸದಾನಂದ ಆಚಾರ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಭಜನಾ ತಂಡದ ಸುಮಾರು 24 ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿ ದೇವಳದ ಆಡಳಿತ ಮಂಡಳಿಯಿಂದ ಆಶೀರ್ವಾದ ಪಡೆದರು.