
ಸುತ್ತಲಿನ ಪರಪಂಚ ಕತ್ತಲಾಗಿಹುದು, ನಾ ಸಾಗುವ ದಾರಿಯು ಮುಚ್ಚಿಹೋಗಿಹುದು…
ನನ್ನ ಬದುಕು ಇಂದು ಬೂದಿ ಮುಚ್ಚಿದ ಕೆಂಡದಂತಾಗಿಹುದು,
ಇದು ಸಿಡಿಯುವುದೋ ಶಮನಗೊಳ್ಳುವುದೋ ತಿಳಿಯದಾಗಿಹುದು…
ಸಿಡಿದರೆ ನನ್ನ ಬದುಕು ಅಂತ್ಯವಾಗುವುದು, ಶಮನಗೊಂಡರೆ ಹೊಸ ಬದುಕು ಆರಂಭವಾಗುವುದು…
ಪ್ರತಿಯೊಂದು ಅಂತ್ಯಕ್ಕೂ ಅರಂಭವಿಹುದು, ಪ್ರತಿಯೊಂದು ಘಟನೆಗೂ ಕಾರಣವೊಂದಿಹುದು…
ಆ ಕಾರಣವಿಂದು ನಿಗೂಢವಾಗಿಹುದು…
ಆ ನಿಗೂಢತೆಯ ಮೌನದಲ್ಲೂ ಉತ್ತರವೊಂದಡಗಿಹುದು…
ಆ ಉತ್ತರ ತಿಳಿಯುವ ದಾರಿಯು ಮುಚ್ಚಿ ಹೋಗಿಹುದು, ಯಾರ ಕಣ್ಣಿಗೂ ಕಾಣದಾಗಿಹುದು…
ಕಾಣದಿದ್ದರೂ ಹುಡುಕಬೇಕು ಕಾರಣವ ಇದಲ್ಲಾ ನಾಳೆ, ಹುಡುಕದಿದ್ದರೆ ಇಲ್ಲವಾಗುವುದು ನನ್ನ ಬದುಕಿನ ನಾಳೆ…
ನಾಳೆಗಳ ಯೋಚನೆಯಲ್ಲಿ ಇಂದು ಕಳೆದೋಗುವುದು…
ಇಂದು ನಾಳೆಗಳ ಜಂಜಾಟದಲ್ಲಿ ಬದುಕಿನ ಓಟ ಮುಗಿದೋಗುವುದು…
ಈ ಬದುಕಿನ ಓಟದಲ್ಲಿ ನನ್ನ ಪರಪಂಚ ಕತ್ತಲಾಗಿಯೇ ಉಳಿಯುವುದು…
ಕತ್ತಲಿನ ಅಂಧಕಾರದಲ್ಲಿ ನನ್ನ ಬದುಕು ಅಂತ್ಯವಾಗುವುದು, ಮುಂದೊಂದು ದಿನ ಅಂತ್ಯವಾಗುವುದು…
✍ಉಲ್ಲಾಸ್ ಕಜ್ಜೋಡಿ