
ಹರಿಹರ ಪಲ್ಲತ್ತಡ್ಕದ ಶ್ರೀ ಸಂಗಮ ಕ್ಷೇತ್ರದಲ್ಲಿ ಡಿ.24 ರಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಬಾಲಾಲಯ ಪ್ರತಿಷ್ಠೆ ನಡೆಯಿತು.

2 ವರ್ಷಗಳ ಹಿಂದೆ ಬಾಲಕೃಷ್ಣ ನಾಯರ್ ರವರ ಮುಖಾಂತರ ನಡೆದ ಪ್ರಶ್ನೆಯಲ್ಲಿ ಸಂಗಮ ಕ್ಷೇತ್ರದಲ್ಲಿ ಈಗ ಇರುವ ಅಯ್ಯಪ್ಪ ಸ್ವಾಮಿ ಮಂದಿರವನ್ನು ತೆಗೆದು ಹೊಸದಾಗಿ ಮಂದಿರ ನಿರ್ಮಾಣ ಮಾಡಬೇಕು ಎಂದು ಕಂಡುಬಂದಿದ್ದು, ಕೊರೊನಾದ ಕಾರಣದಿಂದ ಕೆಲಸ ಕಾರ್ಯಗಳು ನಡೆಯದೇ ಇದ್ದು, ಈಗ ಕೊರೊನಾ ಕಡಿಮೆಯಾಗುತ್ತಾ ಬಂದಿರುವ ಕಾರಣ ಅಯ್ಯಪ್ಪ ಸ್ವಾಮಿ ಮಂದಿರ ನಿರ್ಮಾಣದ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಡಿ.24 ರಂದು ಬಾಲಾಲಯ ಪ್ರತಿಷ್ಠೆ ನಡೆಯಿತು.
ಗೋಪಾಲ ಗುರುಸ್ವಾಮಿ ಹಾಗೂ ಮೋಹನ ಗುರುಸ್ವಾಮಿ ಬಾಲಾಲಯ ಪ್ರತಿಷ್ಠೆ ಮಾಡಿದರು.
ನಂತರ ಸಂಜೆ ಶ್ರೀರಾಮ ಭಜನಾ ತಂಡ ಚಿಕ್ಮುಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ