ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನವಾರ್ಷಿಕ ಮಹಾಸಭೆಯು ಡಿ.19 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು. ಸಂಘವು ರೂ.100 ಕೋಟಿ 42 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.43ಲಕ್ಷ 64,287.81 ನಿವ್ವಳ ಲಾಭ ಗಳಿಸಿದೆ. ರೂ.1,73,03,559.32 ವಿವಿಧ ನಿಧಿಗಳಿವೆ. ರೂ.13,65,59,169.95 ವಿವಿಧ ಠೇವಣಾತಿಗಳು ಇದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯಲ್ಲಿ ಸಂಸ್ಥೆಯು ಮುನ್ನಡೆಯುತ್ತಿದೆ ಎಂದು ಅವರೈ ಹೇಳಿದರು. ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎನ್ ಜಿ, ನಿರ್ದೇಶಕರಾದ ಎ ಗಂಗಾಧರ ಗೌಡ, ಮಹಾಬಲ ಕೆ, ನಾರಾಯಣ ಕೆ ಕೆ, ಶ್ರೀಮತಿ ಸುಧಾ ಎಸ್ ಭಟ್, ಶ್ರೀಮತಿ ಲಲಿತ ಪಿ, ಮಹಮ್ಮದ್ ಹನೀಫ್, ರಾಮ ನಾಯ್ಕ ಎಂ, ಕರುಣಾಕರ ಜೆ, ಶೇಷಪ್ಪ ಎ ವಿ, ಮೋಹನ ಕೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಜೋಷಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮಾಜಿ ನಿರ್ದೇಶಕರಾಗಿ 21 ವರ್ಷ ಸೇವೆ ಸಲ್ಲಿಸಿದ ಪ್ರಗತಿಪರ ಕೃಷಿಕ ಕೆ ಶಂಕರ ನಾರಾಯಣ ಭಟ್ ತಿಪ್ಪನಕಜೆ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರದ್ಧಾಂಜಲಿ ಅರ್ಪಣೆ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಸೇನಾಧಿಕಾರಿಗಳಿಗೆ, ಇತ್ತೀಚೆಗೆ ನಿಧನರಾದ ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ ಎಸ್ ದೇವರಾಜ್ , ಸಂಘದ ಪೂರ್ವಾಧ್ಯಕ್ಷ ರಾಗಿ ಸೇವೆಸಲ್ಲಿಸಿದ ಜಿ.ಯಂ. ಮಹಮ್ಮದ್ ಮುಚ್ಚಿಲ, ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಎಂ ಮಹಮ್ಮದ್ ಮುಚ್ಚಿಲ ಹಾಗೂ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ನಾರಾಯಣ ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ಎನ್ ಜಿ ಸ್ವಾಗತಿಸಿದರು. ವ್ಯವಸ್ಥಾಪಕ ಪ್ರಶಾಂತ್ ಜೆ ನಿರೂಪಿಸಿದರು.ಮಹಾಬಲ ಕೆ ಸನ್ಮಾನ ಪತ್ರ ವಾಚಿಸಿದರು.ಸುಬ್ರಹ್ಮಣ್ಯ ಜೋಷಿ ಕೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಮತ್ತು ವಂದಿಸಿದರು.