
ಕಳಂಜ ಬುಖಾರಿಯ ಜುಮಾ ಮಸೀದಿಯ ಬಳಿ ಬದ್ರೀಯಾ ಕಲ್ಚರಲ್ ಸೆಂಟರ್ ಕಳಂಜ ಇದರ ನೂತನ ಕಛೇರಿಯ ಉದ್ಘಾಟನೆ ಕಾರ್ಯಕ್ರಮವು ಡಿ.24ರಂದು ಮಧ್ಯಾಹ್ನ 2 ಗಂಟೆಗೆ ನಡೆಯಿತು. ಉದ್ಘಾಟನೆಯನ್ನು ಊರ ಗಣ್ಯರಾದ ಉದಯ ಚಿಕನ್ ಸೆಂಟರ್ ಮಾಲಕ ಮುಹಮ್ಮದ್ ಕೆ.ಎಂ ನೆರವೇರಿಸಿದರು. ಕಾರ್ಯಕ್ರಮಕ್ಕೆ ದುವಾಶೀರ್ವಾದವನ್ನು ಸಂಶುದ್ದೀನ್ ಪೈಝಿ ಮಾಪಳ್ ನೆರವೇರಿಸಿದರು. ಗಣ್ಯ ಉಪಸ್ಥಿತಿಯಲ್ಲಿ ಬದ್ರೀಯಾ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಅಝೀಝ್ ಟಿ, ಅಧ್ಯಕ್ಷರಾದ ಇಸ್ಮಾಯಿಲ್ ಪಿಎಸ್, ಅಬ್ದುಲ್ ಜಮಾಲ್ ಏಕೆ, ಅಬುಬಕ್ಕರ್ ಎನ್ ಕೆ, ಅಶ್ರಫ್ ಏಕೆ, ಇಸ್ಹಾಕ್ ಕಳಂಜ ಖಾಲಿದ್ ಕಳಂಜ ಇದ್ದರು.