ಸುಬ್ರಹ್ಮಣ್ಯ – ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ.19 ರ ಆದಿತ್ಯವಾರದಂದು ಬೆಳಿಗ್ಗೆ 10:00 ಗಂಟೆಗೆ ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಇವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಪಿ.ಯು ಕಾಲೇಜಿನ ಬೆಳಿಹಬ್ಬ ಸಭಾಭವನದಲ್ಲಿ ನಡೆಯಿತು.
ಸಂಘವು 2020-21 ನೇ ಸಾಲಿನಲ್ಲಿ 20,06,389 ರೂಪಾಯಿ ಲಾಭಾಂಶ ದಾಖಲಿಸಿದ್ದು, ಸಂಘದ ಸದಸ್ಯರಿಗೆ ಶೇ.6% ಡಿವಿಡೆಂಡ್ ವಿತರಣೆ ಮಾಡುವುದಾಗಿ ಘೋಷಿಸಲಾಯಿತು.
ಸಂಘವು ಪ್ರಸಕ್ತ ವರ್ಷದಲ್ಲಿ 93 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಾಧವ.ಡಿ, ನಿರ್ದೇಶಕರುಗಳಾದ ಸೋಮಸುಂದರ ಕೂಜುಗೋಡು, ರವೀಂದ್ರ ಕುಮಾರ್ ರುದ್ರಪಾದ, ಮೋಹನ್ ದಾಸ್ ರೈ, ವೆಂಕಟೇಶ್.ಎಚ್.ಎಲ್, ದಾಮೋದರ, ಕಿರಣ್ ಪೈಲಾಜೆ, ಸುಬ್ರಹ್ಮಣ್ಯ ರಾವ್.ಎ, ಭಾರತಿ.ಬಿ.ಡಿ, ಆಶಾ ಕುಮಾರಿ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್.ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ದೀಪಿಕಾ ಹೊಸೋಳಿಕೆ, ಯೋಗಿತಾ ಪೈಲಾಜೆ, ಎಸ್.ಎಸ್.ಎಲ್.ಎಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವೆನೆಸ್ಸಾ ಸೆರೆನಾ ಡಿಸೋಜಾ ಸುಬ್ರಹ್ಮಣ್ಯ, ರಕ್ಷಾ ಪೈಲಾಜೆ, ಏಳನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ನಿರೀಕ್ಷಾ ಕುಲ್ಕುಂದ ಹಾಗೂ ಐದನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ನಿರೀಕ್ಷಾ ಪಳ್ಳಿಗದ್ದೆ ಇವರುಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು. ಜೊತೆಗೆ ಸಾಲ ಮರುಪಾವತಿಗಾಗಿ ರಾಜಮ್ಮ ಗುಂಡಡ್ಕ, ಹರೀಶ್.ಎಂ ಸುಬ್ರಹ್ಮಣ್ಯ ಹಾಗೂ ಅತೀ ಹೆಚ್ಚು ಠೇವಣಿ ನೀಡಿದ ಚಂದ್ರಹಾಸ ಭಟ್ ಇವರುಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ನಂತರ ಮದ್ಯಾಹ್ನ 12:00 ಗಂಟೆಗೆ ಮಿತ್ರ ಆಪ್ತ ಸಮಾಲೋಚನಾ ಕೇಂದ್ರ ತುಮಕೂರು ಇದರ ನಿರ್ದೇಶಕರಾದ ಸಿ.ಸಿ ಪಾವಟೆ ಅವರಿಂದ “ಗ್ರಾಮೀಣ ಅಭಿವೃದ್ಧಿಯಲ್ಲಿ ಕೃಷಿಕರ ಪಾತ್ರ ಹಾಗೂ ಈಗಿನ ಮನಸ್ಥಿತಿ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಅದ್ಯಕ್ಷ ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ, ನಿರ್ದೇಶಕ ರವೀಂದ್ರ ಕುಮಾರ್ ರುದ್ರಪಾದ ವಂದಿಸಿದರು. ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್.ಕೆ.ಎಸ್ ವರದಿ ವಾಚಿಸಿದರು. ಸೊಸೈಟಿ ಸಿಬ್ಬಂದಿಗಳು ಸಹಕರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ