
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಂಘದಿಂದ “Maths Shortcut tricks and tips” ಎಂಬ ವಿಷಯದ ಕುರಿತ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆ ಪುತ್ತೂರು ಇದರ ಸಹ ಸಂಸ್ಥಾಪಕಿ ಹಾಗೂ ಅಕಾಡೆಮಿಕ್ ಕೌನ್ಸೆಲರ್ ಆದ ಶ್ರೀಮತಿ ಪ್ರಫುಲ್ಲಾ ಗಣೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೃತೀಯ ಬಿ ಕಾಂ ವಿದ್ಯಾರ್ಥಿನಿ ಸಂಧ್ಯಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ಸಂಘದ ಸಂಚಾಲಕಿ ದಿವ್ಯಾ ಟಿ ಎಸ್ ಸ್ವಾಗತಿಸಿ, ತೃತೀಯ ಬಿ ಕಾಂ ವಿದ್ಯಾರ್ಥಿನಿಯರಾದ ಮೇಘಾ ವಂದಿಸಿ, ಸನಾ ಉಸ್ಮಾನ್ ಕಾರ್ಯಕ್ರಮ ನಿರೂಪಿಸಿದರು.