ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಗೊಂಡ ಚಂದ್ರಶೇಖರ ಪೇರಾಲುರವರಿಗೆ ಅಭಿನಂದನೆ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಡಿ.16 ರಂದು ಶಾಲಾ ಸಭಾಂಗಣ ದಲ್ಲಿ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ ನಂದಗೋಕುಲ ಸಭಾಧ್ಯಕ್ಷತೆ ವಹಿಸಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅಭಿನಂದನಾ ಭಾಷಣ ಮಾಡಿದರು.
ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ದೇವಚಳ್ಳ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಸಂಪನ್ಮೂಲ ಅಧಿಕಾರಿ ಸಂತೋಷ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆರೆಮೂಲೆ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಕೋಶಾಧಿಕಾರಿ ದಯಾನಂದ ಆಳ್ವ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅಜ್ಜಾವರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗೋಪಿನಾಥ ಮೆತ್ತಡ್ಕ, ಶಿಕ್ಷಕರ ಪರವಾಗಿ ವಸಂತ ನಾಯಕ್, ವಿದ್ಯಾರ್ಥಿಗಳಾದ ಆತ್ಮಶ್ರೀ, ಶಾಲಾ ವಿದ್ಯಾರ್ಥಿ ನಾಯಕ ನಿಶಾಂತ್, ಕೃತಿ ಚಂದ್ರಶೇಖರ ಪೇರಾಲುರವರ ಬಗ್ಗೆ ಮಾತನಾಡಿದರು. ದೇವಚಳ್ಳ ಗ್ರಾ.ಪಂ. ಸದಸ್ಯೆ ಪ್ರೇಮಲತಾ ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದ್ರಶೇಖರ ಪೇರಾಲುರವರ ಸಹೋದರ ಮಂಜುನಾಥ ಹಾಗೂ ನಿವೃತ್ತ ದೈ.ಶಿ. ವಸಂತ ಗೌಡ ಪೇರಾಲುರವರೊಂದಿಗಿನ ಒಡನಾಟ ಹಂಚಿಕೊಂಡರು.
ಸಭೆಯಲ್ಲಿ ಶ್ರೀ ವೆಂಕಟರಮಣ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ರಮಾನಂದ ಜಬಳೆ ಮೊದಲಾದವರಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಜೇಶ್ವರಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ವಿಜೇತ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ವಿರೂಪಾಕ್ಷ ಧನ್ಯವಾದ ಸಲ್ಲಿಸಿದರು. ಶಿಕ್ಷಕ ಸುಂದರ ಕೆ. ಪೇರಾಲುರವರ ಪರಿಚಯ ವಾಚಿಸಿದರು. ಶಿಕ್ಷಕ ಮುರಳೀಧರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ತಿರುಮಲೇಶ್ವರಿ, ಗೌರವ ಶಿಕ್ಷಕಿ ಸಂಗೀತ ಸಹಕರಿಸಿದರು.