ಸುಳ್ಯ ತಾಲ್ಲೂಕು ಬಂಟರ ಯಾನೆ ನಾಡವರ ಸಂಘದ ಸಭೆಯು ಬಂಟ್ಸ್ ಹಾಸ್ಟೆಲಿನ ಸಭಾಂಗಣದಲ್ಲಿ ಡಿ. 18ರಂದು ತಾಲ್ಲೂಕು ಅಧ್ಯಕ್ಷರಾದ ಎನ್. ಜಯಪ್ರಕಾಶ್ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಕೇನ್ಯ ರವೀಂದ್ರನಾಥ ರೈ ಸುಭಾಶ್ಚಂದ್ರ ರೈ ತೋಟ ,ಗಂಗಾಧರ ರೈ, ಪ್ರೀತಮ್ ರೈ ಹಾಗೂ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆನಡೆಯಿತು. ಜನವರಿಯಲ್ಲಿ ನಡೆಯುವ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಈ ವೇಳೆ ಬಿಡುಗಡೆಗೊಳಿಸಲಾಯಿತು. ಸುಳ್ಯ ತಾಲ್ಲೂಕು ಯುವ ಬಂಟರ ಸಂಘದ ವತಿಯಿಂದ ನಿರ್ಮಾಣ ಹಂತದಲ್ಲಿರುವ ಬಂಟರ ಸಭಾಭವನಕ್ಕೆ ದೇಣಿಗೆಯಾಗಿ ₹ 1,11,111.00 ತಾಲೂಕು ಸಮಿತಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಪಿ. ಬಿ ಸುಧಾಕರ ರೈ, ಗೌರವಾಧ್ಯಕ್ಷರು ಅಮೃತಕುಮಾರ್ ರೈ , ಅಧ್ಯಕ್ಷರಾದ ಪ್ರೀತಮ್ ರೈ ಹಾಗೂ ಎಲ್ಲಾ ವಲಯದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
- Thursday
- November 21st, 2024