ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಆಶ್ಲೇಷ್.ಆರ್.ವಿ 32 ನಿಮಿಷ 4 ಸೆಕೆಂಡುಗಳ ಕಾಲ ತನ್ನ ಕೈಯ ತೋರು ಬೆರಳನ್ನು ಕೈಯ ಮಣಿಗಂಟಿನ ಹಿಂಭಾಗದಲ್ಲಿ ಮಡಚಿ ಹಿಡಿದಿಟ್ಟುಕೊಂಡು “ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್” ನಲ್ಲಿ ಸ್ಥಾನ ಪಡೆದಿದ್ದಾನೆ.
ಬಳ್ಪ ಗ್ರಾಮದ ಕೃಷಿಕರಾದ ರಮೇಶ್ ಭಟ್ ಹಾಗೂ ವೀಣಾ ಸಾವಿತ್ರಿ ದಂಪತಿಗಳ ಪುತ್ರನಾದ ಆಶ್ಲೇಷ್ ತನ್ನ ಈ ಪ್ರಯತ್ನವನ್ನು 5ನೇ ತರಗತಿಯಲ್ಲಿರುವಾಗ ಹವ್ಯಾಸಕ್ಕೆಂದು ಆರಂಭಿಸಿದ್ದು, ಪ್ರಾರಂಭದಲ್ಲಿ ಕಡಿಮೆ ಅವಧಿಗಷ್ಟೇ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ನಂತರ ದಿನಕಳೆದಂತೆ ಸಮಯ ಹೆಚ್ಚಿದ್ದು, ಈಗ ಬೇರೊಬ್ಬರ ಹೆಸರಿನಲ್ಲಿದ್ದ 22 ನಿಮಿಷ 40 ಸೆಕೆಂಡುಗಳ ದಾಖಲೆಯನ್ನು ಮುರಿದಿದ್ದಾನೆ.
ವರದಿ :- ಉಲ್ಲಾಸ್ ಕಜ್ಜೋಡಿ