
ಕೊಡಿಯಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ಸ್ವಚ್ಛತೆ ಧೈಯದೊಂದಿಗೆ ನ.28 ರಿಂದ ಆರಂಭವಾದ ಬೃಹತ್ ಸ್ವಚ್ಛತಾ ಅಭಿಯಾನ ಸತತ ನಾಲ್ಕು ಭಾನುವಾರ ನಡೆದು ಕಾರ್ಯಕ್ರಮ ಪೂರ್ಣಗೊಂಡಿದೆ. ಇದರ ಅಂಗವಾಗಿ ಸಾರ್ವಜನಿಕರ ಮನೆ ಮನಗಳಿಗೆ ಸ್ವಚ್ಛತಾ ಪರಿಕಲ್ಪನೆಯನ್ನು ತಲುಪಿಸುವ ಉದ್ದೇಶದಿಂದ
ಸ್ವಚ್ಛತಾ ಸಂಭ್ರಮ ಆಚರಣೆಯು
ಡಿ.19ರಂದು ಅಪರಾಹ್ನ 2-00 ಗಂಟೆಯಿಂದ
ಕಲ್ಲಗದ್ದೆ ಶ್ರೀ ಸುಬ್ರಹ್ಮಣೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದ ಶ್ರೀಗಳಾದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ
ವಿಠಲ ನಾಯಕ್‌ರವರಿಂದ
ಆರೋಗ್ಯ ಮತ್ತು ಸ್ವಚ್ಛತೆ ಪರಿಕಲ್ಪನೆಯ
ಗೀತಾ ಗಾಯನ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.