Ad Widget

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ- ಒಟ್ಟು ಲಾಭಾಂಶ ರೂ.20,78,434.33, ಸದಸ್ಯರಿಗೆ 3% ಡಿವಿಡೆಂಡ್ ಘೋಷಣೆ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ ಇವರ ಅಧ್ಯಕ್ಷತೆಯಲ್ಲಿ ಡಿ.18 ಶನಿವಾರದಂದು ಸಂಘದ ಸಭಾಭವನ ‘ಅಮರ ಸಹಕಾರ ಸೌಧ’ ಕುಕ್ಕುಜಡ್ಕದಲ್ಲಿ ನಡೆಯಿತು.
ಸಂಘದ ನಿರ್ದೇಶಕ ಗಣೇಶ್ ಪಿಲಿಕಜೆ ಪ್ರಾರ್ಥಿಸಿದರು.

. . . . . . . . .

ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ ಸರ್ವರನ್ನು ಸ್ವಾಗತಿಸಿ, ಸಂಘವು 2020-21ನೇ ಸಾಲಿನಲ್ಲಿ ರೂ.20,78,434.33/- ನಿವ್ವಳ ಲಾಭಾಂಶ ಗಳಿಸಿದ್ದು ಸದಸ್ಯರಿಗೆ 3% ಡಿವೆಡೆಂಡ್ ನೀಡುವುದಾಗಿ ಘೋಷಿಸಿದರು. ಅಲ್ಲದೇ ಸದಸ್ಯರಿಗಾಗಿ ಮರಣ ಸಾಂತ್ವನ ನಿಧಿ ಸ್ಥಾಪಿಸುವುದು, ಬೆಳೆ ವಿಮೆ ವಿತರಣೆ ಮಾಡುವುದಾಗಿ ತಿಳಿಸಿದರು. ಸಂಘದ ‘ಅಮರ ಸಹಕಾರ ಸೌಧ’ ಸಭಾಭವನದ ಸಾಲ ಸಂಪೂರ್ಣ ತೀರಿಸಲಾಗಿದ್ದು ಈ ಸಂದರ್ಭದಲ್ಲಿ ಸಂಘದ ಸರ್ವ ಸದಸ್ಯರಿಗೆ ಧನ್ಯವಾದ ಸಲ್ಲಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಕುಮಾರ್.ಪಿ ಕಾರ್ಯಸೂಚಿ ಮಂಡಿಸಿದರು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಜನರಲ್ ಬಿಪಿನ್ ರಾವತ್ ಹಾಗೂ ವರದಿ ವರ್ಷದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

. . . . . . .

ಸಭೆಯಲ್ಲಿ ಸಂಘದ ಅಧ್ಯಕ್ಷರಾದ ರಾಘವೇಂದ್ರ.ಪಿ.ಕೆ, ಉಪಾಧ್ಯಕ್ಷರಾದ ಕೇಶವ.ಕೆ, ನಿರ್ದೇಶಕರಾದ ಸದಾಶಿವ.ಎಂ, ಪ್ರವೀಣ್ ಎಸ್ ರಾವ್, ಶಿವರಾಮ ಕಾನಡ್ಕ, ಸುರೇಶ್.ಡಿ.ಕೆ, ಪೂವ ಅಜಿಲ, ಶಿವಪ್ಪ ನಾಯ್ಕ.ಸಿ, ಶ್ರೀಮತಿ ಎಂ.ಎಸ್.ಲತೇಶ್ವರಿ, ಶ್ರೀಮತಿ ಮಧುಮತಿ ರಾಧಾಕೃಷ್ಣ, ಗಣೇಶ್.ಪಿ, ಜನಾರ್ಧನ.ಕೆ.ಎಸ್ ಹಾಗೂ ಜಯದೀಪ್ ಮತ್ತು ಸಿಬ್ಬಂದಿ ವರ್ಗದವರು, ಸಂಘದ ಸದಸ್ಯರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading