- Wednesday
- April 16th, 2025

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉಪಯೋಗಕ್ಕಾಗಿ ಖರೀದಿಸುವ ಆಂಬುಲೆನ್ಸ್ ಖರೀದಿ ಯೋಜನೆಗೆ ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಶ್ರೀ ಶಂಖಪಾಲ ಸುಬ್ರಮಣ್ಯ ದೇವಸ್ಥಾನ ವಳಲಂಬೆ ಇದರ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ ಹಾಗೂ ಹೆಚ್. ವಿಮಲಾ ಹೊಸೊಳಿಕೆ ಮತ್ತು ಮನೆಯವರು ಸಹಾಯಧನ ನೀಡಿ ಮಹತ್ವದ ಈ...

ಡಾ. ಕುರುಂಜಿ ವೆಂಕಟ್ರಮಣ ಗೌಡರ 93 ನೇ ಜಯಂತ್ಯೋತ್ಸವದ ಕೆವಿಜಿ ಸುಳ್ಯ ಹಬ್ಬ ದಶಮಾನೋತ್ಸವ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕೆವಿಜಿ ಸುಳ್ಯಹಬ್ಬ ಕಚೇರಿಯಲ್ಲಿ ಡಿ.16 ರಂದು ನಡೆಯಿತು.ಡಿ.25 ಹಾಗೂ 26 ರಂದು ಸುಳ್ಯದ ಕೆವಿಜಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ.ಈ ಸಂದರ್ಭ ಕೆವಿಜಿ ಸುಳ್ಯ ಹಬ್ಬದ ಆಚರಣೆ ಸಮಿತಿ ಅಧ್ಯಕ್ಷ ಪಿ.ಸಿ ಜಯರಾಮ, ಸ್ಥಾಪಕಾಧ್ಯಕ್ಷ...

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ಗುರುವಾರದಂದು ಧನುಃಪೂಜೆ ಆರಂಭಗೊಂಡಿದೆ. ಧನುಃಪೂಜೆಯು ಜ.14 ಶುಕ್ರವಾರದ ತನಕ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 05.15 ಕ್ಕೆ ಸರಿಯಾಗಿ ಧನುಪೂಜೆ ಆರಂಭಗೊಳ್ಳಲಿದೆ. ಧನುಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ರೂ.250 ರ ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳಾದ ಸುಹಾನ.ಪಿ ತಿಳಿಸಿದ್ದಾರೆ.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ.15 ರ ಬುಧವಾರದಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯಗೊಂಡಿತು.ಡಿ.15 ರಂದು ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈಧಿಕ ವಿಧಾನಗಳನ್ನು ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಇಳಿಸಲಾಯಿತು. ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರಾ ಮಹೋತ್ಸವವು ಸಮಾಪ್ತಿಯಾಯಿತು. ಈ ದಿನ...