ಮಡಿಕೇರಿಯಲ್ಲಿ ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಅಂಜೇರಿ ನಿವಾಸಿ ಚಿನ್ನಪ್ಪ ನಾಯ್ಕರವರು ಡಿ.15 ರಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿನ್ನಪ್ಪ ನಾಯ್ಕರವರು ರಜೆಯ ಮೇಲೆ ಮನೆಯಲಿದ್ದು, ಡಿ.15 ರಂದು ಮುಂಜಾನೆ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ನವೆಂಬರ್ ತಿಂಗಳಿನಲ್ಲಿ ಎಸ್.ಐ ಆಗಿ ಭಡ್ತಿ ಹೊಂದಿದ್ದ ಇವರು ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದರು.
ಮೃತರಿಗೆ 59 ವರ್ಷ ವಯಸ್ಸಾಗಿದ್ದು, ತಂದೆ ರಾಮಣ್ಣ ನಾಯ್ಕ, ತಾಯಿ ಕಮಲ, ಪತ್ನಿ ಲೀಲಾವತಿ, ಪುತ್ರ ಸೃಜನ್, ಸಹೋದರಿಯರು, ಕುಟುಂಬಸ್ಥರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ