
ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಸರಕಾರದ ಯೋಜನೆ ಖಂಡಿಸಿ ಎಲ್ಲಾ ಬ್ಯಾಂಕ್ ನೌಕರರು ಡಿ.16 ಮತ್ತು 17 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಎಟಿಎಂ ಗಳಲ್ಲಿ ಕ್ಯಾಶ್ ಮುಗಿಯುವ ತನಕ ಇರಲಿದೆ ಎಂದು ತಿಳಿದುಬಂದಿದೆ. ಆದರೂ ಸಾರ್ವಜನಿಕರು ಮನೆಯಿಂದ ಹೊರಡುವಾಗಲೇ ತುರ್ತು ಅವಶ್ಯಕತೆಗೆ ಬೇಕಾದ ಹಣದ ಜತೆಗೆ ಹೊರಡುವುದು ಒಳಿತು.