Ad Widget

ವಿಧಾನ ಪರಿಷತ್ ಗೆ ಶ್ರೀನಿವಾಸ ಪೂಜಾರಿಗೆ 4ನೇ ಬಾರಿಗೆ ಆಯ್ಕೆ- ಪ್ರಥಮ ಹೆಜ್ಜೆ ಇರಿಸಿದ ಮಂಜುನಾಥ ಭಂಡಾರಿ

ರಾಜ್ಯದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿ.10 ರಂದು ನಡೆದ ಚುನಾವಣೆಯ ದ.ಕ ಜಿಲ್ಲೆಯ ದ್ವಿ ಸದಸ್ಯ ಪರಿಷತ್ ಕ್ಷೇತ್ರದ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು 4ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

. . . . . . . . .

ಮತ ಎಣಿಕೆ ಆರಂಭ ಆದಾಗಿನಿಂದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮೊದಲ ಸ್ಥಾನದಲ್ಲಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಎರಡನೇ ಸ್ಥಾನದಲ್ಲಿದ್ದರು.

. . . . . . .

ಈ ಬಾರಿ ದ.ಕ ಜಿಲ್ಲೆಯ ದ್ವಿ ಸದಸ್ಯ ಪರಿಷತ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಪರ್ಧಿಸಿದ್ದರು.

ಅಂತಿಮ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು 3693 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಇತ್ತ ಕಾಂಗ್ರೆಸ್ ನಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಈ ಹಿಂದಿನ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಆದರೆ ಈ ಬಾರಿ ಕೆಪಿಸಿಸಿಯಲ್ಲಿ ವಿವಿಧ ಹುದ್ದೆ ನಿರ್ವಹಿಸಿದ್ದ ಮಂಜುನಾಥ ಭಂಡಾರಿ ಅವರನ್ನು ಕಾಂಗ್ರೆಸ್ ಕಣಕಿಳಿಸಿತ್ತು. ಭಂಡಾರಿಯವರು 2077 ಮತ ಪಡೆದು ವಿಜಯಶಾಲಿಗಳಾಗಿದ್ದಾರೆ. ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 203 ಮತ ಪಡೆದರೆ, 39 ಮತಗಳು ತಿರಸ್ಕೃತಗೊಂಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading