
ಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ 2020-21ನೇ ಸಾಲಿನ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಡಿ.14 ರಂದು ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಲಭಿಸಿದೆ. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರ ವಿಷ್ಣು ಭಟ್ ಮೂಲೆತೋಟ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಯು ಪಡೆದುಕೊಂಡರು. ನಿರ್ದೇಶಕರಾದ ಉಮೇಶ ಪ್ರಭು, ಶ್ರೀಮತಿ ಇಂದಿರಾ ಕೆ ಯವರು ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಜೊತೆಗಿದ್ದರು.