
2020-21 ನೇ ಸಾಲಿನಲ್ಲಿ ಶೇಕಡಾ 100 ಸಾಲ ವಸೂಲಾತಿ ಮಾಡಿ ಸಾಧನೆ ಮಾಡಿರುವ ಐವರ್ನಾಡು ಪ್ರಾ.ಕೃ.ಪ.ಸ.ಸಂಘಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿದೆ. ಡಿ.14 ರಂದು ನಡೆದ ಮಹಾಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರಕುಮಾರ್ ಅವರಿಂದ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಐವರ್ನಾಡು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕರಾದ ಮಹೇಶ್ ಜಬಳೆ, ಕೃಷ್ಣ ಬೆಳ್ಚಪ್ಪಾಡ, ವಾಸುದೇವ ಬೊಳುಬೈಲು, ಚಂದ್ರಶೇಖರ, ಭವಾನಿ ಎಂ.ಸಿ, ಸರಸ್ವತಿ ಕೆ, ಸಂಘದ ಸಿಬ್ಬಂದಿಗಳಾದ ದೀಕ್ಷಿತ್, ಉದಯಶಂಕರ, ಬೋಜಪ್ಪ, ಅನಿಲ್ ಉಪಸ್ಥಿತರಿದ್ದರು.