Ad Widget

ಕಾಂಗ್ರೆಸ್ ಗೆ ಎಸ್.ಡಿ.ಪಿ.ಐ ಸದಸ್ಯರ ಬೆಂಬಲ ಅಗತ್ಯವಿಲ್ಲ- ಬಿಜೆಪಿ ಹಾಗೂ ಎಸ್.ಡಿ.ಪಿ.ಐ ಕೋಮುವಾದಿ ಪಕ್ಷ : ಆರ್.ಕೆ.ಮಹಮ್ಮದ್

ಡಿ.10 ರಂದು ನಡೆದ ವಿಧಾನ ಪರಿಷತ್ ಚುನಾವಣೆ ಬಳಿಕ ಸುಳ್ಯ ನಗರ ಪಂಚಾಯತ್ ಕಾರ್ಯಾಲಯದ ಮುಂದೆ ಕಾಂಗ್ರೆಸ್ 4 ಸದಸ್ಯರು ಮತ್ತು ಪಕ್ಷೇತರ 2 ಸದಸ್ಯರು ಮತ್ತು ಉಸ್ತುವಾರಿ ಸದಸ್ಯರೊಂದಿಗೆ ವಿಜಯದ ಸಂಕೇತವನ್ನು ತೋರಿಸಿ ಫೋಟೋ ಪೋಸ್ ಕೊಟ್ಟು ಮಾಧ್ಯಮದಲ್ಲಿ ಸಾರ್ವಜನಿಕರಿಗೆ ತಿಳಿಸಿರುವುದನ್ನು ನಾನು ಖಂಡಿಸುತ್ತೇನೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಸಂಘಟನಾ ಕಾರ್ಯದರ್ಶಿ, ಸುಳ್ಯ ನಗರ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ಕೆ. ಮಹಮ್ಮದ್ ಹೇಳಿದರು.
ಡಿ.11 ರಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಜಾತ್ಯಾತೀತ ಪಕ್ಷ, ಬಿ.ಜೆ.ಪಿ. ಮತ್ತು ಎಸ್ ಡಿ ಪಿ ಐ ಎರಡೂ ಪಕ್ಷವನ್ನು ಕೋಮುವಾದಿ ಪಕ್ಷ ಎಂದು ಹೇಳುವವರು ನಾವು. ಎರಡೂ ಪಕ್ಷವನ್ನು ಒಂದೇ ರೀತಿ ಕಾಣುವವರು‌. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಉಮ್ಮರ್ ನ ಅವಶ್ಯಕತೆಯಿಲ್ಲ ಇಂತಹ ಕೋಮುವಾದಿಗಳು ಪಕ್ಷಕ್ಕೆ ಬಂದರೆ ಜಾತ್ಯಾತೀತ ಕಾರ್ಯಕರ್ತರು ಸ್ಥಿತಿ ಹೇಗೆ ಆಗಬಹುದು ಎಂದು ಹೇಳಿದರು
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈಯವರ ವಿರುದ್ಧ ಎಸ್ ಡಿ ಪಿ ಐ ಪರವಾಗಿ ಕೆಲಸ ಮಾಡಿ ರಮಾನಾಥ ರೈ ರವರನ್ನು ಸೋಲಿಸಿದವರು. ಮೈಸೂರಿನ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ರವರ ವಿರುದ್ಧ ಅಪಪ್ರಚಾರ ಮಾಡಿ ಅವರನ್ನು ಸೋಲಿಸಲು ಪ್ರಯತ್ನ ಪಟ್ಟವರು. ಮೂಲತಃ ಹುಟ್ಟಿನಿಂದ ಕಾಂಗ್ರೆಸ್ ವಿರೋಧಿ ಉಮ್ಮರ್ ರವರು ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ಧಿಕ್ ಮತ್ತು ಕಾರ್ಯಕರ್ತ ಮೇಲೆ ಹಲ್ಲೆ ಮಾಡಿ ಕೇಸು ದಾಖಲಿಸಿಕೊಂಡವರು ಎಂದರು.
ಕಲ್ಲುಮುಟ್ಟು ಮತ್ತು ಬೋರುಗುಡ್ಡೆಯಲ್ಲಿ ರಿಕ್ಷಾ ಚಿಹ್ನೆಯಲ್ಲಿ ಚುನಾವಣೆಗೆ ನಿಂತವರು ಉಮ್ಮರ್ ನ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯಕತೆಯಿಲ್ಲ. ಪೋಟೋ ತೆಗೆದು ಮಾಧ್ಯಮಕ್ಕೆ ತಿಳಿಸಿದ ವೆಂಕಪ್ಪ ಗೌಡರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ದೂರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ನಾಯಕರಾದ ರಮಾನಾಥ ರೈ, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರಿಗೆ ಪತ್ರವನ್ನು ನೀಡಲಿದ್ದೇನೆ ಎಂದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading