

ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಸುಮಾರು 5 ವರ್ಷಗಳ ಹಿಂದೆ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಸುಬ್ರಹ್ಮಣ್ಯಕ್ಕೊಂದು ಆಂಬ್ಯುಲೆನ್ಸ್ ಸೇವೆ ನೀಡುವ ಉದ್ದೇಶದೊಂದಿಗೆ ದಾನಿಗಳಿಂದ ಹಣ ಸಂಗ್ರಹಿಸಿ ಡಿ.09 ರಂದು ಆಂಬುಲೆನ್ಸ್ ಅನ್ನು ಲೋಕಾರ್ಪಣೆ ಮಾಡಿದೆ.
ಅವಧೂತ ವಿನಯ್ ಗುರೂಜಿ ಆಂಬ್ಯುಲೆನ್ಸ್ ಚಲಾಯಿಸಿ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅದ್ಯಕ್ಷರಾದ ರಂಗಯ್ಯ ಶೆಟ್ಟಿಗಾರ್, ರವಿ ಕಕ್ಕೆಪದವು, ಪುತ್ತೂರಿನ ಎಸ್.ಆರ್.ಕೆ ಲ್ಯಾಡರ್ಸ್ ನ ಮಾಲಕರಾದ ಶ್ರೀ ಕೇಶವ.ಎ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾಂ ಇದರ ವಿಶೇಷಾಧಿಕಾರಿಗಳಾದ ಡಾ| ಶಿವಕುಮಾರ್ ಹೊಸೋಳಿಕೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಅಶೋಕ್ ನೆಕ್ರಾಜೆ ಮುಂತಾದವರು ಶುಭಹಾರೈಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀವತ್ಸ ಬೆಂಗಳೂರು, ಗ್ರಾಮಪಂಚಾಯತ್ ಸದಸ್ಯರುಗಳಾದ ಶ್ರೀ ಎಚ್.ಎಲ್ ವೆಂಕಟೇಶ್ ಹಾಗೂ ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ವಿಮಲಾ ರಂಗಯ್ಯ, ಶ್ರೀಮತಿ ಪುಷ್ಪಾ.ಡಿ ಕಾನತ್ತೂರು, ಶ್ರೀಮತಿ ಶ್ಯಾಮಲಾ ಕಲ್ಲಾಜೆ ಉಪಸ್ಥಿತರಿದ್ದರು.
ಅಶ್ವಮೇಧ, ಯುವ ಬ್ರಿಗೇಡ್, ಗಾಂಗೇಯ ಕ್ರಿಕೆಟರ್ಸ್, ಜೆ.ಸಿ.ಐ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಶ್ರೀರಾಮ್ ಕ್ರಿಕೆಟರ್ಸ್ ದೇವರಹಳ್ಳಿ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕರು, ವರ್ತಕರ ಸಂಘದ ಪದಾಧಿಕಾರಿಗಳು, ಕುಕ್ಕೇಶ್ರೀ ಆಟೋ ಚಾಲಕ ಮಾಲಕರು, ತುಳುವಪ್ಪೆ ಜೋಕುಲು ವಾಟ್ಸಾಪ್ ಗ್ರೂಪ್, ಬಿ.ಎಮ್.ಎಸ್ ಆಟೋ ಚಾಲಕ ಮಾಲಕರು ಹಾಗೂ ಪದಾಧಿಕಾರಿಗಳು, ಯುವತೇಜಸ್ಸು ಟ್ರಸ್ಟ್ ನ ಸದಸ್ಯರು ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಭಕ್ತರು ಮುಂತಾದವರು ಉಪಸ್ಥಿತರಿದ್ದರು.
ಈ ಯುವ ತೇಜಸ್ಸು ಆಂಬ್ಯುಲೆನ್ಸ್ ಲೋಕಾರ್ಪಣೆಯಾದ ಕೆಲವು ಗಂಟೆಗಳಲ್ಲಿ ಸುಬ್ರಹ್ಮಣ್ಯ ಸಮೀಪದ ಏನೆಕಲ್ ನ ಬೂದಿಪಳ್ಳದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ತನ್ನ ಕಾರ್ಯವನ್ನು ಆರಂಭಿಸಿದೆ.
ವರದಿ :- ಉಲ್ಲಾಸ್ ಕಜ್ಜೋಡಿ