
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಚುತ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ, ಸರ್ವಾಂಗೀಣ ಬೆಳವಣಿಗೆಗೆ ಸಹಪಠ್ಯ ಚಟುವಟಿಕೆ ಪೂರಕ. ನಿಮ್ಮ ಕರ್ತವ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಪ್ರಾಮಾಣಿಕತೆಯಿಂದ ಮಾಡಿ, ತಮ್ಮ ಕರ್ತವ್ಯವನ್ನು ಯಾರು ಚೆನ್ನಾಗಿ ನಿಭಾಯಿಸುತ್ತಾರೋ ಅವರೆಲ್ಲರೂ ನಾಯಕರೇ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ. ಮಾತನಾಡಿ, ಸಮಾಜ ಸೇವೆಗೆ ಮೀಸಲಾದ ರೆಡ್ ಕ್ರಾಸ್ ಸಂಸ್ಥೆಗೆ ಸೇರ್ಪಡೆಗೊಂಡ ನೀವು ಇಲ್ಲಿ ಸಿಕ್ಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯಿರಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡಾಗ ತಮ್ಮಲ್ಲಿದ್ದ ಪ್ರತಿಭೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ಸಾಧ್ಯ ಎಂದರು.
ಜೆಸಿಐ ಇಂಡಿಯಾದ ವಲಯ ತರಬೇತುದಾರರಾದ ಶ್ರೀಮತಿ ವಿಮಲ ರಂಗಯ್ಯ, ಎನ್ನೆಂಸಿಯ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ ಬಾಲಚಂದ್ರ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ಪದಗ್ರಹಣ ನಡೆಸಿಕೊಟ್ಟರು.
2020 – 21 ನೇ ಸಾಲಿನ ಘಟಕ ನಾಯಕರಾದ ನಿತಿನ್ ಹಾಗೂ ಕೃತಿಕಾ ಕೆ ಜೆ, 2021-22 ನೇ ಸಾಲಿನ ಘಟಕ ನಾಯಕರಾದ ನಿರಂಜನ್ ಕೆ ಹಾಗೂ ಲಿಮಿತಾ ಪಿ ಜೆ ಯವರಿಗೆ ಹಾಗೂ 2020-21ನೇ ಸಾಲಿನ ಘಟಕದ ಉಪನಾಯಕರಾದ ಗಗನ್ ಎನ್ ಹಾಗೂ ಕಾವ್ಯಾ ಕೆ ಡಿ 2021-22 ನೇ ಸಾಲಿನ ಘಟಕದ ಉಪನಾಯಕರಾದ ಲಿಖಿತ್ ಎಂ ಎನ್, ಲತಾಶ್ರೀ ಡಿ, ಹಾಗೂ ಶುಭಾ ಇವರಿಗೆ ಅಧಿಕಾರ ಹಸ್ತಾಂತರಿಸಿದರು. 2021-22 ನೇ ಸಾಲಿನ ಘಟಕದ ನಿರ್ದೇಶಕರುಗಳಾದ ರೋಜಾ, ಜ್ಞಾನಾ, ಪುನೀತಾ ಕೆ ಸಿ, ರಕ್ಷಾ ಜಿ ಆರ್, ನಿರೀಕ್ಷಾ, ಸುಚಿತ್ರಾ ಕೆ, ನಿಕೇಶ್, ತುಳಸಿ ಪಿ, ರಕ್ಷಿತ್, ಇರ್ಫಾನ್, ಶ್ರೀಶ ಗೋವಿಂದ ಇವರಿಗೆ ಮುಖ್ಯ ಅತಿಥಿಗಳು ಪೆನ್ನು ಹಾಗೂ ಪುಸ್ತಕ ನೀಡುವ ಮೂಲಕ ಜವಾಬ್ದಾರಿ ನೀಡಲಾಯಿತು. ಪ್ರಥಮ ಬಿ ಕಾಂ ನ ರೆಡ್ ಕ್ರಾಸ್ ಸದಸ್ಯರಾದ ಅಮೃತ, ಕೃತಿಕಾ, ಅಂಕಿತಾ ನೃತ್ಯದ ಮೂಲಕ ಗಣ್ಯ ಅತಿಥಿಗಳನ್ನು ಬರಮಾಡಿಕೊಂಡರು. ಪ್ರಥಮ ಬಿಕಾಂ ವಿದ್ಯಾರ್ಥಿನಿ ರತ್ನ ಸಿಂಚನ ವಯಲಿನ್ ವಾದನದ ಮೂಲಕ ಪ್ರಾರ್ಥಿಸಿ, ಪ್ರಥಮ ಬಿ ಎ ವಿದ್ಯಾರ್ಥಿನಿ ನಿರೀಕ್ಷಾ ಸ್ವಾಗತಿಸಿ, ಪ್ರಥಮ ಬಿ ಎಸ್ಸಿ ವಿದ್ಯಾರ್ಥಿನಿ ಮಹಿಮಾ ವಂದಿಸಿದರು. ದ್ವಿತೀಯ ಬಿ ಎಸ್ಸಿ ವಿದ್ಯಾರ್ಥಿನಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.