ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.09 ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು. ಈ ಮೂಲಕ ಚಂಪಾಷಷ್ಠಿ ಮಹಾರಥೋತ್ಸವ ಸಂಪನ್ನವಾಯಿತು. ಡಿ.08 ರಂದು ರಾತ್ರಿ ಪಂಚಮಿ ರಥೋತ್ಸವ ನೆರವೇರಿತು.
ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆಯ ಪ್ರಯುಕ್ತ ಡಿ.8 ರಂದು ಪಂಚಮಿ ರಥೋತ್ಸವ ನೆರವೇರಿತು. ಶ್ರೀ ದೇಗುಲದ ಅರ್ಚಕ ವೇದಮೂರ್ತಿ ರಾಜೇಶ್ ನಡ್ಯಂತಿಲ್ಲಾಯ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪ್ರಾತಃ ಕಾಲ 2:15 ಕ್ಕೆ ಪಂಚಮಿ ರಥೋತ್ಸವ ನೆರವೇರಿತು. ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ನೆರವೇರಿತು. ಡಿ.08 ರಂದು ತೈಲಾಭ್ಯಂಜನ ಹಾಗೂ ಪಂಚಮಿ ರಥೋತ್ಸವ ನೆರವೇರಿತು. ಮದ್ಯಾಹ್ನ ಶ್ರೀ ದೇಗುಲದಲ್ಲಿ ಪಲ್ಲಪೂಜೆ ನೆರವೇರಿತು.
ನಂತರ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನೆರವೇರಿತು. ನಂತರ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ನಂತರ ಚಿಕ್ಕ ರಥೋತ್ಸವ ನೆರವೇರಿತು. ತದನಂತರ ಚಂಪಾಷಷ್ಠಿ ಮಹಾರಥೋತ್ಸವ ನೆರವೇರಿತು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಲತಾ, ಧಾರ್ಮಿಕ ಪರಿಷತ್ ಸದಸ್ಯ ಸಿದ್ದಲಿಂಗ ಸ್ವಾಮಿ, ಅವಧೂತ ವಿನಯ್ ಗುರೂಜಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್ ಪ್ರಸಾದ್, ಶ್ರೀವತ್ಸ, ಲೋಕೇಶ್, ಮನೋಹರ ರೈ, ಶೋಭಾ ಗಿರಿಧರ್, ವನಜಾ.ವಿ ಭಟ್ ಹಾಗೂ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ್ ಮರ್ದಾಳ, ಡಾ| ಚಂದ್ರಶೇಖರ ನಲ್ಲೂರಾಯ, ಮನೋಜ್.ಎಸ್ ಸುಬ್ರಹ್ಮಣ್ಯ, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮಿ, ಉದ್ಯಮಿ ಅಜಿತ್ ಶೆಟ್ಟಿ, ಪೋಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮುಂತಾದವರು ಉಪಸ್ಥಿತರಿದ್ದರು.
ಡಿ.10 ರಂದು ದೇವಸ್ಥಾನದಿಂದ ಬಂಡಿ ರಥದಲ್ಲಿ ಉತ್ಸವ ಮೂರ್ತಿಯ ಅವಭೃತೋತ್ಸವ ಸವಾರಿ ಹೊರಟು ಬಿಲದ್ವಾರದ ಕಟ್ಟೆಯಲ್ಲಿ ಪೂಜೆ ನಡೆದು ಕುಮಾರದಾರ ನದಿಯಲ್ಲಿ ದೇವರಿಗೆ ನೌಕಾವಿಹಾರ ಹಾಗೂ ಅವಭೃತೋತ್ಸವ ನೆರವೇರಿತು.
ವರದಿ :- ಉಲ್ಲಾಸ್ ಕಜ್ಜೋಡಿ