ಸುಬ್ರಹ್ಮಣ್ಯ ಹಾಲುತ್ಪಾದಕರ ಮಹಿಳಾ ಸಹಕಾರಿ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀಮತಿ ಶೋಭಾ ನಲ್ಲೂರಾಯ ಅವರ ಸಭಾಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ನ ರಾಜೀವ್ ಗಾಂಧಿ ಸಭಾಭವನದಲ್ಲಿ ಡಿ.07 ರ ಮಂಗಳವಾರದಂದು ಬೆಳಿಗ್ಗೆ 10:00 ಗಂಟೆಗೆ ನೆರವೇರಿತು. ಸಂಘದ ನಿರ್ದೇಶಕರು ದ.ಕ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಶ್ರೀ ಹರೀಶ್ ಕುಮಾರ್ ಮತ್ತು ಉಪ ವ್ಯವಸ್ಥಾಪಕರಾದ ಡಾ| ಕೇಶವ ಸುಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘವು 2020-21ನೇ ಸಾಲಿನಲ್ಲಿ 2 ಲಕ್ಷದ 362 ರೂಪಾಯಿ 68 ಪೈಸೆ ಲಾಭ ಪಡೆದಿರುತ್ತದೆ. ಅದರಲ್ಲಿ 10% ಡಿವಿಡೆಂಡ್ ಹಂಚಲಾಯಿತು. 2020-21ನೇ ಸಾಲಿನಲ್ಲಿ ಹಾಲು ಹಾಕಿದ ಸದಸ್ಯರಿಗೆ ಪ್ರತೀ ಲೀಟರ್ ಗೆ 1.47 ಪೈಸೆಯಂತೆ ಬೋನಸ್ ವಿತರಿಸಲಾಯಿತು. 2020-21ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಬಹುಮಾನ ನೀಡಲಾಯಿತು. ಮೊದಲನೆಯ ಬಹುಮಾನ ರಾಧಿಕಾ ರುದ್ರಪಾದ ಇವರು ಪಡೆದುಕೊಂಡರು. ಸಂಘದ ಕಾರ್ಯದರ್ಶಿ ಶ್ರೀಮತಿ ಪುಷ್ಪಾ.ಕೆ 2020-21ನೇ ಸಾಲಿನ ವರದಿ ವಾಚಿಸಿದರು. ಹಾಲು ಪರೀಕ್ಷಕಿ ಹೇಮಾವತಿ ಅವರು ವಂದಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ