
ಒಡಿಯೂರು ಶ್ರೀಗಳ ಷಷ್ಟಬ್ಧ ಸಂಭ್ರಮ ಸಮಿತಿ, ಜೈ ಗುರುದೇವಾ ಸೇವಾ ಬಳಗ ಸುಳ್ಯ ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆ, ಭಜನೆ ಕಾರ್ಯಕ್ರಮ, ಶ್ರೀ ಗುರುವಂದನೆ ಮತ್ತು ಸಮಾರೋಪ ಸಮಾರಂಭ ಡಿ.೨೦ರಂದು ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿರುವುದು.
ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಡಿ.೭ರಂದು ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಷಷ್ಟ್ಯಬ್ಧ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಎನ್. ವಿಶ್ವನಾಥ ರೈ ಕಳಂಜರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಒಡಿಯೂರು ಸೇವಾ ಬಳಗದ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಪಕಳ, ಒಡಿಯೂರು ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಶಾರದಾಮಣಿ ಎಸ್.ರೈ, ಸ್ಥಾಪಕಾಧ್ಯಕ್ಷ ಸಾಂತಪ್ಪ ರೈ, ಷಷ್ಟ್ಯಬ್ಧ ಸಂಭ್ರಮ ಸಮಿತಿಯ ಕಾರ್ಯದರ್ಶಿ ಪುಷ್ಪರಾಜ ಗಾಂಭೀರ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಒಡಿಯೂರು ವಿವಿದೋದ್ದೇಶ ಸಹಕಾರಿ ಬ್ಯಾಂಕಿನ ಮೆನೇಜರ್‌ರಾದ ಸುಜಾತ, ಸಂತೋಷ ಕುಮಾರ್ ಶೆಟಿ, ಸೇವಾ ಬಳಗದ ಸದಸ್ಯರು, ಒಡಿಯೂರು ಸಂಘದ ಮೇಲ್ವಿಚಾರಕರು, ಸಂಯೋಜಕರು, ಸೇವಾ ದೀಕ್ಷಿತರು, ಭಕ್ತರು ಉಪಸ್ಥಿತರಿದ್ದರು.