
ಮಡಪ್ಪಾಡಿ ಗ್ರಾಮ ಪಂಚಾಯತ್ ನ ಅಕ್ಷಯ ಸಂಜೀವಿನಿ ಒಕ್ಕೂಟದ ವತಿಯಿಂದ ಡಿ.6 ರಂದು ಅಣಬೆ ಬೇಸಾಯ ತರಬೇತಿ ಶಿಬಿರ ನಡೆಯಿತು. ವೇದಿಕೆಯಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಹಾನ, ತೋಟಗಾರಿಕೆ ಸಹಾಯಕ ಅಧಿಕಾರಿ ಅರಬಣ್ಣ ಪೂಜಾರಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾ ವಿನೋದ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಕುಂತಳ ಕೇವಳ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷರು ಕಾರ್ಯದರ್ಶಿ ಹಾಗೂ ಎಲ್ಲ ಪದಾಧಿಕಾರಿಗಳು ಎಂ.ಬಿ.ಕೆ.ಮತ್ತು ಎಲ್ಲಾ ಸಿ.ಆರ್.ಪಿ ಅಕ್ಷಯ ಸಂಜೀವಿನಿ ಸಂಘದ ಎಲ್ಲ ಸದಸ್ಯರು ತರಬೇತಿಯಲ್ಲಿ ಭಾಗವಹಿಸಿದ್ದರು.