Ad Widget

ಕೊಲ್ಲಮೊಗ್ರು : ಸಂಘದ ಸದಸ್ಯರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಯೋಜನೆಗೆ ಚಾಲನೆ

ಸಂಘದ ಸದಸ್ಯರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಕಾರ್ಯಕ್ರಮ ಡಿ.07 ರಂದು ಕೊಲ್ಲಮೊಗ್ರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕೊಲ್ಲಮೊಗ್ರು ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಗಜಾನನ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಒಕ್ಕೂಟ ಕಾರ್ಯದರ್ಶಿ ರಾಜಣ್ಣ ವಿಜಯಕುಮಾರ್, ನಿಕಟಪೂರ್ವ ಅದ್ಯಕ್ಷರಾದ ದೇವಣ್ಣ, ಸೇವಾ ಪ್ರತಿನಿಧಿಗಳಾದ ಸಾವಿತ್ರಿ, ಶೋಭಾ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಸೀತಾರಾಮ್ ಹಾಗೂ ಸಂಘದ ಸದಸ್ಯರುಗಳು ಮುಂತಾದವರು ಉಪಸ್ಥಿತರಿದ್ದರು.

. . . . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!