
ಚಿಗುರು ಯುವಕ ಮಂಡಲ ಪೆರಾಜೆ ಮತ್ತು ಜ್ಯೋತಿ ಪ್ರೌಢಶಾಲೆ ಪೆರಾಜೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ‘ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಡಿ.04ರಂದು ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ಜರುಗಿತು.

ಕಾರ್ಯಕ್ರಮವನ್ನು ಎನ್.ಎ.ಜ್ಞಾನೇಶ್ ಅಧ್ಯಕ್ಷರು ಜ್ಯೋತಿ ಪ್ರೌಢಶಾಲೆ ಪೆರಾಜೆ ಇವರು ಉದ್ಘಾಟಿಸಿದರು. ಈ ಶಿಬಿರದಲ್ಲಿ ಅನುಭವಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು ಇವರು ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಎಲ್ಲರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಸಣ್ಣ ವಯಸ್ಸಿನಲ್ಲೇ ಬರುವ ಸಾವು ತಪ್ಪಿಸಲು ಸಾಧ್ಯ ಹಾಗೂ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಮೊದಲು ನಮ್ಮ ಆರೋಗ್ಯ ನಂತರ ಎಲ್ಲವು ಎಂದರು. ತದನಂತರ ನಡೆದ ಶಿಬಿರವನ್ನು ಡಾ.ಪುನೀತ್ ರಾಘವೇಂದ್ರ ಕುಂಟುಕಾಡು, ಹರಿಚರಣ್ ಕುರುಂಜಿ ಮಾಸ್ಟರ್ ಮೆಡಿಕಲ್ ಸುಳ್ಯ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣ ಮಜಿಕೋಡಿ ಅಧ್ಯಕ್ಷರು ಚಿಗುರು ಯುವಕ ಮಂಡಲ ಪೆರಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣುಗೋಪಾಲ್ ಕ್ಯೊಂಗಾಜೆ ಮುಖ್ಯೋಪಾಧ್ಯಾಯರು ಜ್ಯೋತಿ ಪ್ರೌಢಶಾಲೆ ಪೆರಾಜೆ ಇವರು ಉಪಸ್ಥಿತರಿದ್ದರು. ಈ ಶಿಬಿರವನ್ನು ಜನರು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡರು. ಶಿಬಿರದಲ್ಲಿ ಚಿಗುರು ಯುವಕ ಮಂಡಲ ಪೆರಾಜೆ ಇದರ ಸದಸ್ಯರುಗಳು ಹಾಗೂ ಜ್ಯೋತಿ ಪ್ರೌಢಶಾಲೆ ಪೆರಾಜೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಥನೆಯನ್ನು ಶಾಲಾ ವಿದ್ಯಾರ್ಥಿಗಳಾದ ಭಾವನ, ತಜ್ಞಾ, ಚೈತನ್ಯ, ಪ್ರಿಯಾ, ಹರ್ಷಪ್ರಿಯಾ, ಹವ್ಯಶ್ರೀ ನೆರವೇರಿಸಿದರು ಹಾಗೂ ಸ್ವಾಗತವನ್ನು ಮಿಥುನ್ ಮಜಿಕೋಡಿ ಧನ್ಯವಾದವನ್ನು ಚರಣ್ ರಾಜ್ ಕುಂಬಳಚೇರಿ ಮತ್ತು ನಿಧಿ ಹೊದ್ದೆಟ್ಟಿ ಕಾರ್ಯಕ್ರಮ ನಿರೂಪಿಸಿದರು.