
ಬೆಳ್ಳಾರೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ವತಿಯಿಂದ ಬೆಳ್ಳಾರೆ 1ನೇ ವಾರ್ಡಿನ ಕೊಲಂಬಳ ಉಮಿಕ್ಕಳ ರಸ್ತೆಯ ಇಕ್ಕೆಲಗಳಲ್ಲಿ ತುಂಬಿಕೊಂಡಿದ್ದ ಪೊದೆಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಎಸ್.ಡಿ.ಪಿ.ಐ ಮುಖಂಡ ಇಕ್ಬಾಲ್ ಬೆಳ್ಳಾರೆ, ಸುಳ್ಯ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಹಾಜಿ.ಕೆ ಮಮ್ಮಾಲಿ, ಬೆಳ್ಳಾರೆ ಬ್ಲಾಕ್ ಕಾರ್ಯದರ್ಶಿ ಶಹೀದ್ ಎಂ, ಎಸ್. ಡಿ.ಪಿ.ಐ ಬೆಳ್ಳಾರೆ ಗ್ರಾಮ ಸಮಿತಿ ಅಧ್ಯಕ್ಷ ಸಿದ್ದೀಕ್ ಎಂ, ಉಪಾಧ್ಯಕ್ಷ ಶಫೀಕ್, ಕಾರ್ಯದರ್ಶಿ ಜಾಬಿರ್ ಸಿ.ಎಂ, ಸಮಿತಿ ಸದಸ್ಯರಾದ ಬಶೀರ್.ಬಿಎ, ಝೈನುದ್ದೀನ್.ಯು ಎಚ್ , ಉಮಿಕ್ಕಳ ಬೂತ್ ಅಧ್ಯಕ್ಷ ಆಸಿರ್ ಎ.ಬಿ, ತಡಗಜೆ ಬೂತ್ ಅಧ್ಯಕ್ಷ ಬಷೀರ್ ಕೆ. ಎ , ಪಳ್ಳಿಮಜಲು ಬೂತ್ ಅಧ್ಯಕ್ಷ ಸದ್ದಾಂ ಹುಸೇನ್, ಪನ್ನೆ ಬೂತ್ ಅಧ್ಯಕ್ಷ ಅಬ್ದುಲ್ ರಹಿಮಾನ್.ಟಿ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯೆ ನಸೀಮಾರವರ ಪತಿ ಹಾರಿಸ್ ಪಳ್ಳಿಮಜಲು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.