ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಐನೆಕಿದು ಗ್ರಾಮದ ಕೋಟೆಬೈಲು ನಿವಾಸಿ ಜಾಣಪ್ಪ ಅಜಿಲರು ನ.29 ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ 76 ವರ್ಷ ವಯಸ್ಸಾಗಿತ್ತು.
ದೈವ ನರ್ತಕ, ನಾಟಿ ವೈದ್ಯ ಹಾಗೂ ಜಾನಪದ ಕಲಾವಿದರಾಗಿದ್ದ ಇವರಿಗೆ ವಿವಿಧ ಸನ್ಮಾನಗಳು ಲಭಿಸಿವೆ.
ಮೃತರು ಪತ್ನಿ ನಾಗಮ್ಮ, ಜಲಜ ಹಾಗೂ ಪುತ್ರರಾದ ಶೇಖರ, ರಮೇಶ್, ಲೋಕೇಶ್, ರಾಜೇಶ್ ಹಾಗೂ ಪುತ್ರಿಯರಾದ ಶ್ರೀಮತಿ ಲತಾಕುಮಾರಿ ಈಶ್ವರ ಸಜೀಪ, ಶ್ರೀಮತಿ ಲೀಲಾವತಿ ಲೋಕಯ್ಯ ಕಾಂಚನ, ಶ್ರೀಮತಿ ಹೇಮಾವತಿ ಕೃಷ್ಣಪ್ಪ ಕುಂಬ್ರ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ